ನವದೆಹಲಿ: ಪ್ರತಿ ಮಕ್ಕಳಿಗೂ ಹೆತ್ತ ತಾಯಿಯೇ ಶ್ರೀರಕ್ಷೆ.. ಅದೆಷ್ಟೋ ಹೆಣ್ಮಕ್ಕಳು ಮಕ್ಕಳಾಗಿಲ್ಲ ಎಂದು ಕೊರಗುತ್ತಾ ಶತಕೋಟಿ ದೇವರನ್ನೆಲ್ಲ ಪೂಜಿಸುತ್ತಾರೆ. ಆದರೆ ಇಲ್ಲೊಬ್ಬ ತಾಯಿ ಮೊಬೈಲ್ ಫೋನ್, ಮಾತಿಗಿಳಿದರೆ ಹೊರ ಜಗತ್ತಿನ ಪರಿವೆಯೇ ಇಲ್ಲ ಎಂಬ ಟೀಕೆಗೆ ಗುರಿಯಾಗಿದ್ದಾಳೆ. ಹೌದು ಜನರು ನೈಜ ಪ್ರಪಂಚದೊಂದಿಗೆ ಸಂವಹನ ನಡೆಸುವ ಬದಲು ತಮ್ಮ ಫೋನ್ ಗಳಲ್ಲಿ ಮಗ್ನರಾಗಿ ಸಮಯ ಕಳೆಯುತ್ತಿದ್ದಾರೆ. ಫೋನ್ ಕರೆಯಲ್ಲಿ ನಿರತರಾಗಿರುವ ಮಹಿಳೆಯೊಬ್ಬಳು ತನ್ನ ಪುಟ್ಟ ಮಗುವನ್ನು ಫ್ರಿಡ್ಜ್ ನಲ್ಲಿಟ್ಟ ಘಟನೆ ನಡೆದಿದೆ.
ಈ ತಾಯಿಯ ಕೃತ್ಯ ಸೋಷಿಯಲ್ ಮಿಡಿಯಾದಲ್ಲಿ ಫುಲ್ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋ ಒಂದು ನಿಮಿಷ 7 ಸೆಕೆಂಡ್ ಅವಧಿಯದ್ದು. ಅದೊಂದು ರೀತಿ ಜಾಗೃತಿ ಮೂಡಿಸುವ ವಿಡಿಯೋದಂತೆಯೇ ಕಾಣುತ್ತಿದೆಯಾದರೂ ಒಂದು ಕ್ಷಣ ಮೈ ನಡುಗುವಂತೆ ಮಾಡುತ್ತದೆ. ಕಾರಣ ಮಗುವನ್ನು ಅವರು ಬಳಸಿಕೊಂಡ ರೀತಿ.
ಮಗುವೊಂದು ತನ್ನ ತಾಯಿ ಜೊತೆ ಆಟವಾಡುತ್ತಾ ಇರುತ್ತದೆ. ತಾಯಿಗೆ ಫೋನ್ ಬಂದ ಕೂಡಲೇ ತಾಯಿಯ ಗಮನ ಬೇರೆಕಡೆ ಹೋಗುತ್ತದೆ. ಮೊಬೈಲ್ ನಲ್ಲಿ ಮಾತನಾಡುತ್ತಾ ಮಾತನಾಡುತ್ತಾ ತರಕಾರಿ ಹೆಚ್ಚುತ್ತಾಳೆ. ನಂತರ ಫೋನ್ ನಲ್ಲಿ ಮಾತನಾಡುತ್ತಾ ಮಾತನಾಡುತ್ತಾ ಮಗುವನ್ನು ಎತ್ತಿ ಫ್ರಿಡ್ಜ್ ನಲ್ಲಿ ಇಟ್ಟಿದ್ದಾಳೆ. ನಂತರ ಮತ್ತೆ ತನ್ನ ಮಾತು ಮುಂದುವರೆಸುತ್ತಾಳೆ.
ಗಂಡ ಬಂದು ಮಗು ಎಲ್ಲಿ ಎಂದು ಕೇಳಿದಾಗ…ಈಕೆ ಶಾಕ್ ಆಗಿ ಹುಡುಕುತ್ತಾಳೆ. ಬಳಿಕ ಗಂಡ ಫ್ರಿಡ್ಜ್ ತೆರೆದು ನೋಡಿದಾಗ..ಒಂದು ಕ್ಷಣ ಶಾಕ್ ಆಗುತ್ತಾನೆ..ತಾಯಿ ಮಾತನಾಡುವ ಭರದಲ್ಲಿ ಮಗುವನ್ನು ಎತ್ತಿ ಫ್ರಿಡ್ಜ್ ನಲ್ಲಿ ಹಾಕಿರುತ್ತಾಳೆ. ಇದೆಲ್ಲವನ್ನೂ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾದ ಟೈಮ್-ಲಾಪ್ಸ್ ವೀಡಿಯೊದಲ್ಲಿ ತೋರಿಸಲಾಗಿದೆ. ಈ ವಿಡಿಯೋ ಕುರಿತು ಸಾಕಷ್ಟು ಕಾಮೆಂಟ್ಗಳು ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿದೆ.