ದಾವಣಗೆರೆ : ಕಿಡಿಗೇಡಿಗಳು ಫಸಲಿಗೆ ಬಂದಿದ್ದ ಅಡಿಕೆ ಗಿಡಗಳನ್ನು ಕಡಿದು ಹಾಕಿರುವ ಘಟನೆ ಹೊನ್ನಾಳಿ ತಾಲ್ಲೂಕಿನ ಮುಕ್ತೇನಹಳ್ಳಿ ಗ್ರಾಮದಲ್ಲಿ ಕಂಡುಬಂದಿದೆ.
ಪರಮೇಶ್ವರಪ್ಪ ಎಂಬ ರೈತನಿಗೆ ಸೇರಿದ ಎರಡು ಎಕರೆಯಲ್ಲಿರುವ ಸಾವಿರಕ್ಕೂ ಹೆಚ್ಚು ಅಡಿಕೆ ಗಿಡಗಳು ಫಸಲು ಬಂದಿದ್ದು ನಾಲ್ಕು ವರ್ಷಗಳಿಂದ ಮಕ್ಕಳಂತೆ ಸಾಕಿ ಬೆಳೆಸಿದ್ದ ರೈತ ಆದರೆ ಇದನ್ನು ಸಹಿಸದ ಕಿಡಿಗೇಡಿಗಳು ಕಡಿದು ಹಾಕಿದ್ದರು. ಬೆಳಗ್ಗೆ ಅಡಿಕೆ ತೋಟಕ್ಕೆ ಹೋದಾಗ ಅಡಿಕೆ ಗಿಡಗಳನ್ನು ನಾಶವಾಗಿರುವುದನ್ನ ಕಂಡು ಕಣ್ಣೀರು ಹಾಕಿದ ರೈತ ಪರಮೇಶ್ವರಪ್ಪ.
ಕಿಡಿಗೇಡಿಗಳನ್ನು ಬಂಧಿಸುವಂತೆ ಸ್ಥಳೀಯರ ಮನವಿ ಮಾಡಿದ್ದು ಹೊನ್ನಾಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಕೃತ್ಯ ಎಸಗಿದವರನ್ನು ಹಿಡಿಯಲು ಸ್ಕೆಚ್ ಹಾಕಿದ್ದಾರೆ.