ದೊಡ್ಡಬಳ್ಳಾಪುರ : ಎರಡು ಎಕರೆಯಲ್ಲಿ ಬೆಳೆದಿದ್ದ ಪರಂಗಿ ಗಿಡಗಳಿಗೆ ಬೆಂಕಿ ಇಟ್ಟು ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮುಕ್ಕಡಿಘಟ್ಟ ಗ್ರಾಮದಲ್ಲಿ ನಡೆದಿದೆ..
ಗ್ರಾಮದ ರೈತ ನಾಗರಾಜ್ ಎರಡು ವರ್ಷದ ಹಿಂದೆ ತನ್ನ ಜಮೀನಿನಲ್ಲಿ ಪರಂಗಿ ತೋಟ ಮಾಡಿದ್ದ..ಚನ್ನಾಗಿ ಫಸಲಿಗೆ ಕೂಡ ಬಂದಿತ್ತು. ಶುಕ್ರವಾರ ರಾತ್ರಿ ದುಷ್ಕರ್ಮಿಗಳು ತೋಟಕ್ಕೆ ಬೆಂಕಿ ಇಟ್ಟಿದ್ದು ಸುಮಾರು 2 ಸಾವಿರಕ್ಕೂ ಹೆಚ್ಚು ಗಿಡಗಳು ಸುಟ್ಟು ಭಸ್ಮವಾಗಿದೆ.ಇದರ ಜೊತೆ ಡ್ರಿಪ್ ಪೈಪ್ ಗಳು ಸುಟ್ಟು ಬೂದಿಯಾಗಿದ್ದು, ಬೆಂಕಿ ಅವಘಡದಿಂದ 3 ಲಕ್ಷಕ್ಕೂ ಹೆಚ್ಚು ರೈತನಿಗೆ ನಷ್ಟವಾಗಿದೆ.
ಮಕ್ಕಳಿಗೆ ರಜೆ ಇದ್ದ ಕಾರಣ ನಾಗರಾಜ್ ಕುಟುಂಬ ಸಮೇತ ಸಂಬಂಧಿಕರ ಮನೆಗೆ ಹೋಗಿದ್ರು, ಇದನ್ನೆ ಬಂಡವಾಳ ಮಾಡಿಕೊಂಡ ದುಶ್ಕರ್ಮಿಗಳು ತೋಟಕ್ಕೆ ಬೆಂಕಿ ಇಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬರುವಷ್ಟರಲ್ಲಿ ನಾಗರಾಜ್ ರವರ ಎರಡು ಎಕರೆಯಲ್ಲಿದ್ದ ಪರಂಗಿ ತೋಟ ಸುಟ್ಟು ಬೂದಿಯಾಗಿದೆ.