ಬೆಂಗಳೂರು:- ನಗರದಲ್ಲಿ ಬೈಕ್ಗಳನ್ನು ಕದ್ದು ಗ್ರಾಮೀಣ ಭಾಗದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಕಾಡುಗೋಡಿ ಪೊಲೀಸರು (Kadugodi Police) ಬಂಧಿಸಿದ್ದಾರೆ.
ಶರತ್ಬಾಬು ಬಂಧಿತ ಆರೋಪಿ. ಇತನಿಂದ 20 ಲಕ್ಷ ಮೌಲ್ಯದ 19 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಅಸಾಮಿ ಬೆಂಗಳೂರಿನಲ್ಲಿ ಸ್ಪ್ಲೆಂಡರ್ ಬೈಕ್ಗಳನ್ನೇ ಮಾತ್ರ ಕಳ್ಳತನ ಮಾಡಿ, ಅದನ್ನು ಹಳ್ಳಿಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದ. ಇದೀಗ ಪೊಲೀಸರು ಕಾರ್ಯಾಚರಣೆ ನಡೆಸಿ ಇತನನ್ನು ಬಂಧಿಸಿದ್ದಾರೆ