ಚಿತ್ರದುರ್ಗ: ಬಿಪಿಎಲ್ ಕಾರ್ಡ್ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು,ಅನರ್ಹರಿದ್ದಾರೆ ಅವರ ಕಾರ್ಡ್ ಮಾತ್ರ ರದ್ದಾಗುತ್ತದೆ ಎಂದು ಹೇಳಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿ,
ಈ ಬಗ್ಗೆ ಬಿಜೆಪಿ ಜೆಡಿಎಸ್ ನವರು ಗುಲ್ಲೆಬ್ಬಿಸಿದ್ದಾರೆ. ಅರ್ಹರಿಗೂ ಬಿಪಿಎಲ್ ಕಾರ್ಡ್ ಇದೆ ಅವುಗಳನ್ನು ಮಾತ್ರ ರದ್ದು ಮಾಡುತ್ತೇವೆ ಎಂದಿದ್ದಾರೆ. ಬಿಜೆಪಿಗೆ ಮಾಡಲು ಕೆಲಸವಿಲ್ಲ, ದಿನಕ್ಕೊಂದು ಗುಲ್ಲೆಬ್ಬಿಸುತ್ತಾರೆ. ನಮ್ಮ ಪಾಡಿಗೆ ನಾವು ಕೆಲಸ ಮಾಡುತ್ತಿದ್ದು, ಸರ್ಕಾರ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದ ಲ್ಲಿ ನಡೆಯುತ್ತಿದೆ.
ಬೆಂಗಳೂರಿನ BEL ಕಂಪನಿಯಲ್ಲಿದೆ ಭರ್ಜರಿ ಉದ್ಯೋಗಾವಕಾಶ! ತಿಂಗಳಿಗೆ 2 ಲಕ್ಷ ಸಂಬಳ – ಇಂದೇ ಅರ್ಜಿ ಸಲ್ಲಿಸಿ
ಕಾಂಗ್ರೆಸ್ ಶಾಸಕರ ಖರೀದಿಗೆ ಅಮಿಷ ನೀಡಿರುವ ವಿಚಾರ ವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಜಮೀರ್ ಆಹಮದ್ ಹೇಳಿಕೆ ವಿಚಾರ ಮುಗಿದು ಹೋದ ಅಧ್ಯಾಯ, ಜಮೀರ್ ಅಹಮದ್ ಹೇಳಿಕೆಯಿಂದ ಮೈನಸ್ ಮತ್ತು ಪ್ಲಸ್ ಆಗಿರಬಹುದು ಎಂದು ಅಭ್ಯರ್ಥಿಯೇ ಹೇಳಿದ್ದಾರೆ.ನೋಡೋಣ ಇನ್ನು ಹತ್ತು ದಿನ ಅಷ್ಟೆ ಬಾಕಿ ಇದೆ ಫಲಿತಾಂಶಕ್ಕೆ ಎಂದರು.