ಬೆಂಗಳೂರು: ಸಿನಿಮಾ ನೋಡೋದು ಮನೋರಂಜನೆಗೆ, ಆದರೆ ಕೆಲವರು ಅದೇ ನಿಜವೆಂದು ನಂಬುತ್ತಾರೆ. ಇದಕ್ಕೆ ಸಂಬಂದಿಸಿದಂತೆ, ಇಂಥದ್ದೊಂದು ವಿಚಿತ್ರ ಘಟನೆಯು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹೌದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಒಂದಲ್ಲ ಎರಡಲ್ಲ ಬರೋಬ್ಬರಿ 7 ಕೋಟಿ ರೂ. ಹಣ ಬೆಟ್ಟಿಂಗ್ಗೆ ಹಾಕಿ ಸಿಕ್ಕಿಬಿದ್ದಿದ್ದಾನೆ. ದುಲ್ಕರ್ ಸಲ್ಮಾನ್ ಅಭಿನಯದ “ಲಕ್ಕಿ ಭಾಸ್ಕರ್” ಸಿನಿಮಾ ಈತನಿಗೆ ಪ್ರೇರಣೆಯಾಗಿದ್ದು,
ಶ್ರೀಕಾಂತ್ ಎಂಬಾತನನ್ನು ಅಶೋಕನಗರ ಪೊಲೀಸರು ಸದ್ಯ ಬಂಧಿಸಿದ್ದಾರೆ. ವಿವಿಧ ಕಂಪನಿಗಳಿಗೆ ಅಕೌಂಟಿಂಗ್ ಸರ್ವಿಸ್ ನೀಡುತ್ತಿದ್ದ ಖಾಸಗಿ ಕಂಪನಿಯಲ್ಲಿ ಬಂಧಿತ ಆರೋಪಿ ಶ್ರೀಕಾಂತ್, ಅಸೋಸಿಯೇಟ್ ಅಕೌಂಟೆಂಟ್ ಆಗಿದ್ದರು.
CISF Recruitment 2025: ಕೈಗಾರಿಕಾ ಭದ್ರತಾ ಪಡೆಯಲ್ಲಿ ಉದ್ಯೋಗಾವಕಾಶ..! ವೇತನ 69 ಸಾವಿರ ರೂ
ಸ್ವಿಗ್ಗಿ ಇಂಡಿಯಾದ ಎಲೆಕ್ಟ್ರಿಸಿಟಿ ಬಿಲ್ ಪಾವತಿಗೆ ಶ್ರೀಕಾಂತ್ನನ್ನು ನೇಮಿಸಲಾಗಿತ್ತು. ಆದರೆ ಕಳೆದ ವರ್ಷ ಜೂನ್ನಿಂದ ಡಿಸೆಂಬರ್ವರೆಗೂ ಕಂಪನಿ ಕ್ರೆಡಿಟ್ ಕಾರ್ಡ್ ಮೂಲಕ ಹಣ ಬಳಕೆ ಮಾಡಿದ್ದು, ಬರೋಬ್ಬರಿ 7 ಕೋಟಿ ರೂ. ಹಣವನ್ನ ಬಿಟಿಎನ್ ಎಕ್ಸ್ಚೆಂಜ್247.ಕಾಂ (BetinExchange247.com) ಬೆಟ್ಟಿಂಗ್ ಆ್ಯಪ್ನಲ್ಲಿ ಹೂಡಿಕೆ ಮಾಡಿದ್ದಾರೆ.
ಇದೇ ಜನವರಿಯಲ್ಲಿ ನಡೆದ ಸ್ವಿಗ್ಗಿ ಆಡಿಟಿಂಗ್ ವೇಳೆ ಈ ವಿಚಾರ ಬಯಲಾಗಿದೆ. ವಿಚಾರ ತಿಳಿದು ಪ್ರಶ್ನಿಸಿದಾಗ ಬೆಟ್ಟಿಂಗ್ನಲ್ಲಿ ಹೂಡಿಕೆ ಮಾಡಿದ್ದು ಬಯಲಾಗಿದೆ. ಬಳಿಕ ಕಂಪನಿಯಿಂದ ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರು ಆಧರಿಸಿ ಅಶೋಕನಗರ ಪೊಲೀಸರು ಶ್ರೀಕಾಂತ್ನನ್ನು ಬಂಧಿಸಿದ್ದಾರೆ.