ಚಾಮರಾಜನಗರ : ಅಪ್ರಾಪ್ತ ಯುವತಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದ ವ್ಯಕ್ತಿಯೋರ್ವನ ವಿರುದ್ಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಿದರಳ್ಳಿ ಗ್ರಾಮದ ನಿವಾಸಿ ಮದನ್ ಈ ಪ್ರಕರಣದ ಆರೋಪಿಯಾಗಿದ್ದಾನೆ. ಹನೂರು ತಾಲೂಕಿನ ಬಿದರಳ್ಳಿ ಗ್ರಾಮದ ನಿವಾಸಿ ಮದನ್ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಅಪ್ರಾಪ್ತ ಯುವತಿಯನ್ನು ಪುಸಲಾಯಿಸಿ ಕರೆದೊಯ್ದಿರುವ ಬಗ್ಗೆ ಅಪ್ರಾಪ್ತ ಯುವತಿಯ ತಾಯಿ ಅನುಮಾನ ವ್ಯಕ್ತಪಡಿಸಿ ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಬೈಕ್ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಕಾಡಾನೆ ದಾಳಿ ; ಮಹಿಳೆಗೆ ಗಂಭೀರ ಗಾಯ
ಪ್ರಕರಣ ದಾಖಲು ಮಾಡಿಕೊಂಡಿದ್ದ ರಾಮಾಪುರ ಪೊಲೀಸರು ವಿಶೇಷ ತಂಡ ರಚನೆ ಮಾಡಿ ಖಚಿತ ಮಾಹಿತಿ ಮೇರೆಗೆ ಯುವತಿಯನ್ನು ಪತ್ತೆ ಹಚ್ಚಿದ್ದಾರೆ. ಮದನ್ ಹೊಸಪೇಟೆ ಬಳಿಯ ಗ್ರಾಮವೊಂದರಲ್ಲಿ ತನ್ನ ಪರಿಚಯಸ್ಥರ ಮನೆಯಲ್ಲಿ ಅಪ್ರಾಪ್ತ ಯುವತಿಯನ್ನು ಇರಿಸಿರುವುದು ಪತ್ತೆ ಹಚ್ಚಿ ಕರೆತಂದಿದ್ದಾರೆ. ಇದೀಗ ಯುವತಿಯನ್ನು ಚಾಮರಾಜನಗರದ ಸಾಂತ್ವನ ಕೇಂದ್ರಕ್ಕೆ ಬಿಡಲಾಗಿದೆ. ಆರೋಪಿ ಮದನ್ ನನ್ನು ಬಂಧಿಸಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.