ಬೆಳಗಾವಿ : ಸಾಲ ಕೊಟ್ಟವರ ಕಿರುಕುಳ ತಾಳಲಾರದೇ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಮಾರುತಿ ಗಲ್ಲಿಯಲ್ಲಿ ನಡೆದಿದೆ. ರಫೀಕ್ ಬಾಬುಸಾಬ್ ತಿಗಡಿ(38) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಾಲ್ತುಳಿತ ಪ್ರಕರಣದಲ್ಲಿ ನಾಲ್ವರ ಸಾವು ; ಇಂದು ಸಂಜೆ ವೇಳೆಗೆ ಬೆಳಗಾವಿಗೆ ಮೃತದೇಹ
ಸಾಲ ಮಾಡಿ ಬುಲೆರೋ ಪಿಕ್ ಆಪ್ ವಾಹನ ಕೊಂಡುಕೊಂಡಿದ್ದು, ವಾರದ ಬಡ್ಡಿ ಲೆಕ್ಕದಲ್ಲಿ ಸಾಲ ಪಡೆದಿದ್ದರು. ಬಡ್ಡಿಗೆ ಚಕ್ರಬಡ್ಡಿ ಸಮೇತ ತಿಂಗಳಿಗೆ ಕಟ್ಟಿಕೊಂಡು ಬರುತ್ತಿದ್ದ. ಈಗ ಅಸಲು ಸಮೇತ ಆರು ಲಕ್ಷ ಕಟ್ಟುವಂತೆ ಒತ್ತಡ ಹೇರಿದ್ದರು. ಇದ್ರಿಂದಾಗಿ ಬೇಸತ್ತು ನಿನ್ನೆ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮರಣೋತ್ತರ ಪರೀಕ್ಷೆಗೆಂದು ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ.