ಹುಬ್ಬಳ್ಳಿ: ಮಂತ್ರಾಕ್ಷತೆ ನಾವು ಕೊಡುತ್ತಿದ್ದೇವೆ. ಇದರ ವಿವಾದವನ್ನು ಕಾಂಗ್ರೆಸ್ ಮಾಡುತ್ತಿದೆ. ನಮಗೆ ರಾಮಮಂದಿರ ಉದ್ಘಾಟನೆ ಸಂಪನ್ನವಾಗಬೇಕು. ನಮ್ಮ ಅಕ್ಕಿ ತಗೊಂಡು ಮಂತ್ರಾಕ್ಷಿತೆ ಅಂತಾರೆ. ಹೌದಪ್ಪಾ ನೀವ ಎಲ್ಲಿ ಅಕ್ಕಿ ಕೊಟ್ಟಿದ್ದೀರಿ. ಸುಳ್ಳ ಹೇಳೋರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಒಂದು ಕಾಳ ಅಕ್ಕಿ ಕೊಟ್ಟಿಲ್ಲ ನೀವು. ಮೊದಲು ಶ್ರೀರಾಮ ಇಲ್ಲ ಎಂದು ಅಪಮಾನ ಮಾಡಿದ್ರೀ. ಶ್ರೀರಾಮನ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಿದ್ರೀ. ಇದೀಗ ಎಲ್ಲ ಆದ ಮೇಲೆ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ನಮ್ಮ ಅಕ್ಕಿ ಅಂತಿದ್ದಾರೆ. ನೀವು ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು ಎಂದರು.
ಕಾಂಗ್ರೆಸ್ ನವರು ಇಷ್ಟು ದಿನ ರಾಮ ಇಲ್ಲ ಅಂತೀದ್ರು. ಇದೀಗ ಪೂಜೆ ಮಾಡೋಕೆ ಹೇಳಿದ್ದಾರೆ. ಮೊನ್ನೆ ಸಿದ್ದರಾಮಯ್ಯ ಗುಡಿ ಒಳಗೆ ಹೋಗಲಿಲ್ಲ. ಇದನ್ನೆಲ್ಲಾ ರಿಪೇರಿ ಮಾಡೋಕೆ ಮಾಡಿದಾರೆ. ಕರಸೇವಕರ ಮೇಲೆ ಗುಂಡು ಹಾರಿಸಿದ್ದು ಯಾರೂ ಅನ್ನೋದ ಗೊತ್ತಿದೆ ಎಂದು ಅವರು ಹೇಳಿದರು.
ಯಾರೂ ರಾಮ ಭಕ್ತರಿದಾರೆ,ಬಿಜೆಪಿ ಪರ ಕೆಲಸ ಮಾಡೋರನ್ನ ಹೊರಗೆ ಹಾಕಬೇಕು ಅಂತಾರೆ. ಆದ್ರೆ ನಾವು ಅಷ್ಟು ಸರಳವಾಗಿ ಹೊರಗೆ ಹೋಗಲ್ಲ. ನಾವು ಹೋರಾಟ ಮಾಡಿ ಇಲ್ಲಿಗೆ ಬಂದಿದ್ದೇವೆ. ಹುಬ್ಬಳ್ಳಿಯ ಗಲಭೆ ಮಾಡಿದವರು ನಿಮಗೆ ಅಮಾಯಕರು,ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಾಟೆ ಮಾಡಿದವರು ನಿಮಗೆ ಅಮಾಯಕರು. ಮಂಗಳೂರ ಬಾಂಬ್ ಬ್ಲಾಸ್ಟ್ ಮಾಡಿದವರು ನಿಮಗೆ ಸಹೋದರರು. ಹೀಗಾಗಿ ನಿಮಗೆ ಐಎಸ್ ಮಾದರಿ ಆಡಳಿತ ಅನ್ನಲಾರದೆ ಏನ ಅನಬೇಕು ಎಂದು ಜೋಶಿ ಕಿಡಿ ಕಾರಿದರು.
ಮಂತ್ರಿಗಿರಿ ಉಳಿಬೇಕಲ್ಲ ಹಾಗಾಗಿ ನನ್ನ ಬೈಯುತ್ತಿದ್ದಾರೆ. ನನ್ನ ಬೈದರೇ ,ಬಿಜೆಪಿ ಮೋದಿ ಅವರನ್ನು ಬೈದ್ರೆ ಮಂತ್ರಿಗಿರಿ ಉಳಿಯತ್ತೆ ಅನ್ನೋದಕ್ಕೆ ಮಾತಾಡ್ತೀದಾರೆ. ಮಾತಾಡಲಿ ಪಾಪ ಎಂದು ಅವರು ಹೇಳಿದರು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಲ್ಲಿ ಅಕ್ಕಿ ಕೊಡುತ್ತಿದ್ದೇವೆ. ಆ ರಸೀದಿ ಕೊಡೋಕೆ ಹೇಳಿದ್ದೇವೆ. ಯಾಕಂದ್ರೆ ಎಷ್ಟು ಕೆಜಿ ಏನೂ ಅನ್ಮೋ ರೆಕಾರ್ಡ್ ಉಳಿಯಲ್ಲ. ಹಾಗೆ ಕೊಡೋದ ಆದ್ರೆ ಯಾರ ಅಕ್ಕಿ ಕೊಡ್ತಾರೆ ಅನ್ನೋದ ಹೇಗೆ ಗೊತ್ತಾಗಬೇಕು. ನಾವು ರಸೀದಿ ಕೊಡಲ್ಲ ಅಂದ್ರಲ್ಲ ಅಂದರೆ ಏನರ್ಥ. ಇದು ಸಂಪೂರ್ಣ ಕೇಂದ್ರ ಬೊಕ್ಕಸದಿಂದ ಕೊಡ್ತೀರೋ ಯೋಜನೆ. ನಾವು 10 ಕೆಜಿ ಅಕ್ಕಿ ಕೊಡ್ತೀವಿ ಅಂದಿದ್ರಿ.10 ಕೆಜಿ ಅಕ್ಕಿ ಕೊಡಿ ಎಂದ ಜೋಶಿ ಟೀಕಿಸಿದರು.