ಅವನು ಆಕೆಯನ್ನು ಹುಚ್ಚನಂತೆ ಪ್ರೀತಿ ಮಾಡ್ತಿದ್ದ , ಅವಳಿಗಾಗಿ ಆಕೆಯ ಇಡೀ ಕುಟುಂಬವನ್ನೆ ಪೋಷಣೆ ಮಾಡ್ತಿದ್ದ ದೂರದ ನೇಪಾಳದಿಂದ ಕರೆದುಕೊಂಡು ಬಂದು ಇಲ್ಲೆ ಜೀವನ ನಡೆಸುತ್ತಿದ್ದ ಆದ್ರೆ ಆಕೆಯ ಮನಸ್ಸು ಮಾತ್ರ ಬೇರೆ ಕಡೆ ವಾಲಿತ್ತು ,ಕದ್ದು ಮುಚ್ಚಿ ಮತ್ತೊಬ್ಬನ ಜೊತೆ ಸುತ್ತಾಡುತ್ತಿದ್ದಳು ಕೇಳಿದಕ್ಕೆ ಹೊಸ ಲವರ್ ಜೊತೆ ಸೇರಿ ಹಳೆ ಪ್ರೇಮಿಯನ್ನ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ..
ಈ ಪೋಟೋದಲ್ಲಿ ಕಾಣುವ ಈ ಜೋಡಿಯ ಹೆಸರು ಲೋಕೇಶ್ ,ಸಂದ್ಯಾ ಇಬ್ಬರು ಮೂಲತಃ ನೇಪಾಳ ಮೂಲದವರು. ಅಲ್ಲಿ ಶುರುವಾದ ಪ್ರೀತಿ ಬೆಂಗಳೂರು ಕಡೆಗೆ ಬರುವಂತೆ ಮಾಡಿತು. ನಾಲ್ಕು ವರ್ಷಗಳ ಹಿಂದೆ ಬಿಟಿಎಂ ಲೇಔಟ್ ನಲ್ಲಿ ಬಂದು ನೆಲೆಸಿದ್ದ ಲೋಕೇಶ್ , ಆಕೆಗಾಗಿ ಒಂದು ಮನೆಯನ್ನು ಮಾಡಿ, ಅವರ ಪೋಷಕರನ್ನ ಕರೆಸಿದ್ದ, ಜೊತೆಗೆ ಆಕೆಯ ಅಕ್ಕನ ಮಕ್ಕಳನ್ನು ಶಾಲೆಗೆ ಸೇರಿಸಿ ಓದಿಸುತ್ತಿದ್ದ ಅವಳ ಹೆಸರಿನಲ್ಲಿ ಒಂದು ಗಾಡಿಯನ್ನು ಖರೀದಿ ಮಾಡಿಕೊಟ್ಟಿದ್ದ ಇಷ್ಟೆಲ್ಲಾ ಅವಳಿಗಾಗಿ ಮಾಡಿದ್ದ ಪಾಗಲ್ ಪ್ರೇಮಿಗಾಗಿ ಅವಳು ಮಾತ್ರ ಚಂಗಲು ಆಟ ಆಡ್ತಿದ್ಲು.ಬೇರೆಯೊಬ್ಬನ ಜೊತೆ ಸುತ್ತಾಟ ಶುರು ಮಾಡಿದ್ಲು.
ಇದರಿಂದ ನೊಂದ ಲೋಕೇಶ್ ಸಂದ್ಯಾ ಗೆ ಇದೆಲ್ಲಾ ಬೇಡ ನಾನು ನಿನ್ನನು ತುಂಬಾ ಪ್ರೀತಿ ಮಾಡುತ್ತಿದ್ದೇನೆ ಎಂದು ಹೇಳಿದ್ನಂತೆ. ಆದ್ರೂ ಸಂದ್ಯಾ, ಲೋಕೇಶ್ ಕೊಡಿಸಿದ್ದ ಒಂದು ಮೊಬೈಲ್ ,ಗಾಡಿ ಹಾಗೂ ಮನೆಯಲ್ಲಿದ್ದ ಚಿನ್ನಾಭರಣ, ನಗದು ಎತ್ತಿಕೊಂಡು ಹೊಸ ಪ್ರೇಮಿ ಬಿಕಾಸ್ ಕುಮಾರ್ ಜೊತೆ ಎಸ್ಕೇಪ್ ಆಗಿದ್ದಾಳೆ.
ನನ್ನ ವಸ್ತುಗಳನ್ನು ವಾಪಸ್ಸು ಕೋಡು ಎಂದು ಕೇಳಿದಕ್ಕೆ ಜಕ್ಕೂರು ಬಳಿ ಬಾ ಎಂದು 14 ನೇ ತಾರೀಖು ಕರೆಸಿಕೊಂಡು ಬಿಕಾಸ್ ಕುಮಾರ್ ಅಂಡ್ ಟೀಂ ಚಾಕು, ಸ್ಕ್ರೂ ಡ್ರೈವರ್ ನಿಂದ ಹಲ್ಲೆ ಮಾಡಿದ್ದಾರೆ.ನೊಂದ ಲೋಕೇಶ್ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ತೆಗೆದುಕೊಂಡು ಠಾಣೆಗೆ ದೂರು ನೀಡಿದ್ದಾನೆ. ಆರೋಪಿ ಬಿಕಾಸ್ ಕುಮಾರ್ ಮತ್ತು ಆತನ ಸ್ನೇಹಿತ ನನ್ನ ಅರೆಸ್ಟ್ ಮಾಡಿರೋ ಅಮೃತಹಳ್ಳಿ ಪೋಲಿಸರು ತನಿಖೆ ಮಾಡಿ ಜೈಲಿಗೆ ಕಳುಹಸಿದ್ದಾರೆ.