ಬೆಂಗಳೂರು:- ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವ ಶಿಕಾರಿಪುರ ಕ್ಷೇತ್ರದ ಶಾಸಕ ವಿಜಯೇಂದ್ರ ಅವರಿಗೆ ರಾಜ್ಯ ಕಾಂಗ್ರೆಸ್ ಘಟಕ ವ್ಯಂಗ್ಯಭರಿತವಾಗಿ ಶುಭಾಶಯ ಕೋರಿದೆ.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ ಎಂಬ ಸುಳ್ಳನ್ನು ನಂಬಬೇಕು ಎಂದು ಟೀಕಿಸಿದೆ. ಯಡಿಯೂರಪ್ಪನವರ ಮಗ ಎಂಬ ಅರ್ಹತೆಯಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರ ಅವರಿಗೆ ಅಭಿನಂದನೆಗಳು. ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ ಎಂಬ ಸುಳ್ಳನ್ನು ನಂಬಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇವೆ ಎಂದು ವ್ಯಂಗ್ಯಭರಿತವಾಗಿ ಶುಭಾಶಯ ಕೋರಿದೆ.
ಇತ್ತ ರಾಜ್ಯ ಕಾಂಗ್ರೆಸ್ ಘಟಕದ ಟ್ವೀಟ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದ್ದು, ದಶಕಗಳಿಂದ ಒಂದು ಕುಟುಂಬಕ್ಕೆ ಜೀತ ಮಾಡುತ್ತಿರುವ ಪಕ್ಷದ ರಾಜ್ಯ ಘಟಕವೊಂದು ಈ ಮಾತು ಆಡುತ್ತಿರುವುದನ್ನೂ ನಂಬಬೇಕು ಎಂದು ನೆಟ್ಟಿಗರು ತಿರುಗೇಟು ನೀಡಿದ್ದಾರೆ.