ಕಂಪ್ಲಿ : ವಿದ್ಯಾರ್ಥಿಗಳು ಇಂದು ದಿಢೀರ್ ಪ್ರತಿಭಟನೆಯನ್ನು ಕೈಗೊಂಡಿರುವ ಘಟನೆ ಕಂಪ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ಯೆಸ್ ವೀಕ್ಷಕರೇ, ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಅಥಿತಿ ಉಪನ್ಯಾಸಕರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ತರಗತಿಗಳನ್ನು ಬಹಿಷ್ಕರಿಸಿ ಕಳೆದ ೩-೪ ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬಹುಪಾಲು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿರುವ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬಹುತೇಕ ತರಗತಿಗಳು ಸ್ಥಗಿತಗೊಂಡಿವೆ. ಒಂದೆಡೆ ತರಗತಿಗಳು ನಡೆಯುತ್ತಿಲ್ಲ ಮತ್ತು ಇನ್ನೊಂದೆಡೆ ಸೆಮಿಸ್ಟರ್ ಪರೀಕ್ಷೆಯ ದಿನಾಂಕಗಳು ಸಮೀಪಿಸುತ್ತಿವೆ.
ಶೈಕ್ಷಣಿಕವಾಗಿ ನಷ್ಟ ಅನುಭವಿಸುತ್ತಿರುವ ವಿದ್ಯಾರ್ಥಿಗಳನ್ನು ಈ ಪರಿಸ್ಥಿತಿಯು ಸಾಕಷ್ಟು ಆತಂಕಕ್ಕೆ ತಳ್ಳಿದೆ. ರಾಜ್ಯ ಸರ್ಕಾರವು ಕೂಡಲೇ ಈ ಕುರಿತು ಗಮನಹರಿಸಬೇಕು. ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಶೀಲಿಸಿ ಅವರಿಗೆ ನ್ಯಾಯ ಒದಗಿಸಬೇಕು ಮತ್ತು ಕಾಲೇಜುಗಳಲ್ಲಿ ಪಾಠಗಳು ಸರಿಯಾಗಿ ನಡೆಯುವ ನಿಟ್ಟಿನಲ್ಲಿ ಪೂರಕ ವಾತಾವರಣವನ್ನು ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಇನ್ನೂ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ, ನಮಗೆ ಎಕ್ಸಾಮ್ಸ್ ಹತ್ರಾ ಬರ್ತಿವೆ, ನಮಗೆ ಪಾಠ ಮಾಡಿ, ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ, ಪಾಠ ಮಾಡ್ಸಿ, ಇಲ್ಲವದಲ್ಲಿ ಮುಂದಿನ ದಿನದಲ್ಲಿ ನಮ್ಮ ಪೋಷಕರೊಂದಿಗೆ ಪ್ರತಿಭಟನೆ ಕೈಗೊಳ್ಳುತ್ತೆವೆ ಎಂದು ವಿದ್ಯಾರ್ಥಿಯನ್ನು ಅಕ್ರೋಶ ವ್ಯಕ್ತಪಡಿಸಿದರು.
ಅತ್ತ ಪಟ್ಟು ಬಿಡದೆ ಧರಣಿ ಕುಳಿತಿರುವ ಅತಿಥಿ ಉಪನ್ಯಾಸಕರು, ಇತ್ತ ಕ್ಲಾಸ್ ನಡೆಯದೇ ಶೈಕ್ಷಣಿಕವಾಗಿ ನಷ್ಟ ಅನುಭವಿಸುತ್ತಿರುವ ವಿದ್ಯಾರ್ಥಿಗಳು, ಇವರಿಬ್ಬರ ಧ್ವನಿ ಕೇಳಿಸಿದರು ಕೇಳದಂತೆ ಮೌನಿಯಾಗಿರುವ ಸರ್ಕಾರ, ಇನ್ನೂ ಈ ಪ್ರತಿಭಟನೆಗಳು ಯಾವ ತಾರಕಕ್ಕೇರುತ್ತೋ ಎಂದು ಕಾದುನೋಡಬೇಕಿದೆ.