ನ್ಯೂಜಿಲೆಂಡ್ ತಂಡದ ಆರಂಭಿಕ ಬ್ಯಾಟರ್ ಫಿನ್ ಆಲೆನ್ ಸ್ಪೋಟಕ ಶತಕ ಬಾರಿಸಿದ್ದಾರೆ. ಪ್ರವಾಸಿ ಪಾಕಿಸ್ತಾನ ಎದುರು ನಡೆದ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಆಲೆನ್ 62 ಎಸೆತಗಳಲ್ಲಿ 137 ರನ್ಗಳ ಸ್ಪೋಟಕ ಶತಕ ಬಾರಿಸಿದರು. ಪರಿಣಾಮ 45 ರನ್ಗಳಿಂದ ಗೆದ್ದ ನ್ಯೂಜಿಲೆಂಡ್ ತಂಡ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತು.
24 ವರ್ಷದ ಯುವ ಬ್ಯಾಟರ್ ಇದೀಗ ನ್ಯೂಜಿಲೆಂಡ್ ಪರ ಟಿ20-ಐ ಕ್ರಿಕೆಟ್ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ಮಾಡಿದ ದಾಖಲೆಯನ್ನೂ ಪಡೆದುಕೊಂಡಿದ್ದಾರೆ. 2012ರಲ್ಲಿ ಬಾಂಗ್ಲಾದೇಶ ಎದುರು ಬ್ರೆಂಡನ್ ಮೆಕಲಮ್ ಬಾರಿಸಿದ್ದ 123 ರನ್ ಈವರೆಗನ ಗರಿಷ್ಠ ಸ್ಕೋರ್ ಆಗಿತ್ತು. 137 ರನ್ಗಳೊಂದಿಗೆ ಆಲ್ ಈ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ರನ್ಚೇಸ್ ಮಾಡಿದ ಪಾಕಿಸ್ತಾನ ತಂಡ ಸತತ ಮೂರನೇ ಬಾರಿ ವೈಫಲ್ಯ ಅನುಭವಿಸಿತು. ಪಾಕ್ ತಂಡದ ಸ್ಟಾರ್ ಬ್ಯಾಟರ್ ಸರಣಿಯಲ್ಲಿ ಮೂರನೇ ಅರ್ಧಶತಕ ಬಾರಿಸಿಯೂ ತಂಡಕ್ಕೆ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. 20 ಓವರ್ಗಳಲ್ಲಿ ಪಾಕ್ ತಂಡ 7 ವಿಕೆಟ್ ಕಳೆದುಕೊಂಡು 179 ರನ್ ಮಾತ್ರವೇಗಳಿಸಿತು. ಬಾಬರ್ 58 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರ್ ಮಾಡಿದ ಬ್ಯಾಟರ್ ಎನಿಸಿಕೊಂಡರು.