ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಉತ್ತರ ಕೊರಿಯಾದ ಸೈನ್ಯವು ರಷ್ಯಾದ ಬೆಂಬಲಕ್ಕೆ ಬಂದ ನಂತರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಕಿಮ್ ಜಾಂಗ್ ಉನ್ ಸೇನೆಯು ಉಕ್ರೇನ್ ಮೇಲೆ ವಿಧ್ವಂಸಕ ದಾಳಿ ನಡೆಸುತ್ತಿದೆ. ಉತ್ತರ ಕೊರಿಯಾದ ಸೇನೆಯು ಕುರ್ಸ್ಕ್ ಪ್ರದೇಶದಲ್ಲಿ ನೆಲೆಗೊಂಡಿರುವ ಗ್ರಾಮವನ್ನು ಪ್ರವೇಶಿಸಿತು. ಕೇವಲ ಎರಡು ಗಂಟೆಗಳಲ್ಲಿ ಕಿಮ್ ಜಾಂಗ್ ಉನ್ ಸೇನೆ ಇಡೀ ಗ್ರಾಮವನ್ನು ವಶಪಡಿಸಿಕೊಂಡಿದೆ.
ಕುರ್ಸ್ಕ್ ಪ್ರದೇಶದ ಗ್ರಾಮದಲ್ಲಿ ನಿಯೋಜಿಸಲಾದ ಉಕ್ರೇನಿಯನ್ ಸೈನಿಕರು ಕೊಲ್ಲಲ್ಪಟ್ಟರು ಅಥವಾ ಓಡಿಹೋದರು ಎಂದು ಹೇಳಲಾಗುತ್ತಿದೆ. ಉತ್ತರ ಕೊರಿಯಾದ ಸೈನಿಕರು ನೆಲದ ಮೇಲೆ ಉಕ್ರೇನ್ ವಿರುದ್ಧ ದೊಡ್ಡ ಕಾರ್ಯಾಚರಣೆಯನ್ನೇ ಪ್ರಾರಂಭಿಸಿದ್ದಾರೆ.
ಉತ್ತರ ಕೊರಿಯಾದ ಸರ್ವಾಧಿಕಾರಿ, ತನ್ನ ಸ್ನೇಹಿತ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಬೆಂಬಲಿಸುತ್ತಾ, ಉಕ್ರೇನ್ ವಿರುದ್ಧ ತನ್ನ ಸೈನ್ಯವನ್ನು ಕಳುಹಿಸಿದ್ದಾರೆ. ಕಿಮ್ ಜಾಂಗ್ ಉನ್ ಅವರ ಪಡೆಗಳು ಉಕ್ರೇನ್ ಮೇಲೆ ವಿನಾಶ ಉಂಟುಮಾಡುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ಕುರ್ಸ್ಕ್ ಪ್ರದೇಶದ ಗ್ರಾಮವನ್ನು ವಶಪಡಿಸಿಕೊಳ್ಳುವಾಗ, ಅವರ ಸೈನಿಕರು ಕೇವಲ 2 ಗಂಟೆಗಳಲ್ಲಿ 300 ಉಕ್ರೇನಿಯನ್ ಸೈನಿಕರನ್ನು ಕೊಂದರು. ಉತ್ತರ ಕೊರಿಯಾದ ಸೇನೆಯು ಒಬ್ಬ ಉಕ್ರೇನಿಯನ್ ಸೈನಿಕನನ್ನು ಸಹ ಬಂಧಿಸಿಲ್ಲ ಎಂದು ಹೇಳಲಾಗುತ್ತಿದೆ. ಇದರರ್ಥ ಉಕ್ರೇನಿಯನ್ ಸೈನಿಕರು ಕೊಲ್ಲಲ್ಪಟ್ಟರು ಅಥವಾ ಅವರು ಯುದ್ಧಭೂಮಿಯಿಂದ ಓಡಿಹೋದರು ಎನ್ನಲಾಗಿದೆ.
ರಷ್ಯಾದ ಟೆಲಿಗ್ರಾಮ್ ಚಾನೆಲ್ ರೊಮಾನೋಲೈಟ್ ಅನ್ನು ಉಲ್ಲೇಖಿಸಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಉತ್ತರ ಕೊರಿಯಾದ ಸೈನಿಕರು ಉಕ್ರೇನ್ನ ಕುರ್ಸ್ಕ್ ಪ್ರದೇಶದ ಪೆಲ್ಯೊಖೋವೊ ಗ್ರಾಮದ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಸಮಯದಲ್ಲಿ, ಕಿಮ್ ಜಾಂಗ್ ಉನ್ ಅವರ ಸೈನ್ಯವು ಅದ್ಭುತ ಹೋರಾಟದ ಕೌಶಲ್ಯವನ್ನು ಪ್ರದರ್ಶಿಸಿತು. ಅವರು ಕೇವಲ ಎರಡು ಗಂಟೆಗಳಲ್ಲಿ ಉಕ್ರೇನಿಯನ್ ಸೈನಿಕರನ್ನು ಕೊಂದರು. ಉಳಿದ ಸೈನಿಕರು ಓಡಿಹೋದರು ಎನ್ನಲಾಗಿದೆ. ಡಿಸೆಂಬರ್ 6 ರಂದು ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಯುದ್ಧದಲ್ಲಿ, ಉತ್ತರ ಕೊರಿಯಾದ ಸೈನಿಕರು ಸುಮಾರು 300 ಉಕ್ರೇನಿಯನ್ ಸೈನಿಕರನ್ನು ಕೊಂದಿದ್ದಾರೆ ಎನ್ನಲಾಗಿದೆ.
ದಕ್ಷಿಣ ರಷ್ಯಾದಲ್ಲಿ ಉಕ್ರೇನಿಯನ್ ಡ್ರೋನ್ ದಾಳಿಗೆ 9 ವರ್ಷದ ಬಾಲಕ ಬಲಿಯಾಗಿದ್ದು, ಪ್ರಮುಖ ಇಂಧನ ಡಿಪೋ ಹೊತ್ತಿ ಉರಿದಿದೆ. ಅಧಿಕಾರಿಗಳು ಶನಿವಾರ ಈ ಮಾಹಿತಿ ನೀಡಿದ್ದಾರೆ. ಉಕ್ರೇನ್ನ ಗಡಿಯ ಸಮೀಪದಲ್ಲಿರುವ ರಷ್ಯಾದ ಪ್ರದೇಶದ ಬೆಲ್ಗೊರೊಡ್ನ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೋವ್, ವಸತಿ ಪ್ರದೇಶದಲ್ಲಿ ಡ್ರೋನ್ ದಾಳಿಯಲ್ಲಿ ಮಗುವೊಂದು ಮೃತಪಟ್ಟಿದೆ.
ಘಟನೆಯಲ್ಲಿ ಗಾಯಗೊಂಡ ಮಗುವಿನ ತಾಯಿ ಮತ್ತು ಏಳು ತಿಂಗಳ ವಯಸ್ಸಿನ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ಲಾಡ್ಕೋವ್ ಹೇಳಿದ್ದಾರೆ. ಒಂದು ದಿನ ಮುಂಚಿತವಾಗಿ, ರಷ್ಯಾ ಉಕ್ರೇನ್ ಪ್ರದೇಶಗಳಲ್ಲಿ ಭಾರಿ ವೈಮಾನಿಕ ದಾಳಿ ನಡೆಸಿತ್ತು. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಸುಮಾರು ಮೂರು ವರ್ಷಗಳ ಹಿಂದೆ ರಷ್ಯಾ ನಡೆಸಿದ ಬೃಹತ್ ದಾಳಿಯ ನಂತರ ದೇಶದ ಇಂಧನ ಕ್ಷೇತ್ರದ ಮೇಲೆ ನಡೆದ ಅತ್ಯಂತ ಕೆಟ್ಟ ಬಾಂಬ್ ಸ್ಫೋಟಗಳಲ್ಲಿ ಒಂದಾಗಿದೆ ಎಂದು ಹೇಳಿದ್ದರು.