ವಿಜಯಪುರ: ಲೋಕಾಯುಕ್ತ ಅಧಿಕಾರಿ ಸೋಗಿನಲ್ಲಿ ವಂಚನೆ ಮಾಡಲು ಯತ್ನಿಸಿದ ಆರೋಪಿಯನ್ನು ಬಂಧಿಸಲಾಗಿದೆ.ವಿಜಯಪುರ ಜಿಲ್ಲೆಯ ಆಲಮಟ್ಟಿ ಕೆಬಿಜೆಎನ್ಎಲ್ ಅಧಿಕಾರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಕಲಿ ಅಧಿಕಾರಿಯನ್ನು ಬಂಧಿಸಲಾಗಿದೆ. ಮುರಿಗೆಪ್ಪ ನಿಂಗಪ್ಪ ಕುಂಬಾರ (57) ಬಂಧಿತನಾಗಿದ್ದು, ಈತ ತಾನೊಬ್ಬ ಲೋಕಾಯುಕ್ತ ಡಿವೈಎಸ್ಪಿ ಎಂದು ಕೆಬಿಜೆಎನ್ಎಲ್ ಅಧಿಕಾರಿ ಅಶೋಕ ತಿಪ್ಪಣ್ಣ ಬಿರಾದಾರ್ ಎಂಬುವರಿಗೆ ವಂಚಿಸಲು ಯತ್ನಿಸಿದ್ದಾನೆ. ಪ್ರಕರಣವೊಂದರಲ್ಲಿ ತಮ್ಮನ್ನು ವಿಚಾರಣೆಗೆ ಒಳಪಡಿಸಬೇಕಾಗುತ್ತದೆ. ಅದನ್ನು ಮುಚ್ಚಿ ಹಾಕಲು ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಮುದ್ದೇಬಿಹಾಳ ಠಾಣಾ ಪೋಲಿಸರು ಕಾರ್ಯಾಚರಣೆ ನಡೆಸಿ ಕೊನೆಗೂ ನಕಲಿ ಲೋಕಾಯುಕ್ತ ಅಧಿಕಾರಿಯನ್ನು ವಂಚಿಸಿದ್ದಾನೆ. ಬಂಧಿತರ ಮುರಿಗೆಪ್ಪ ಕಂಬಾರ ಸದಲಗಾ ಗ್ರಾಮದ ನಿವಾಸಿಯಾಗಿದ್ದಯು, ಈತ ಹಲವು ಬಾರಿ ನಕಲಿ ಅಧಿಕಾರಿಯ ಸೋಗಿನಲ್ಲಿ ವಂಚಿಸಿದ್ದಾನೆ. ಈತನ ಮೇಲೆ ಈಗಾಗಲೇ ರಾಜ್ಯದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣ ದಾಖಲಾಗಿವೆ. ಮೋಸ, ವಂಚನೆ ಹಾಗೂ ಸೈಬರ್ ಅಪರಾಧಗಳಿಗೆ ಸಂಭಂದಿಸಿದಂತೆ ಒಟ್ಟು ರಾಜ್ಯದ ವಿವಿಧ ಠಾಣೆಯಲ್ಲಿ 57 ಪ್ರಕರಣಗಳು ದಾಖಲಾಗಿವೆ.