ಒಬ್ಬೊಬ್ಬರು ಕೆಲಸವೇ ಇಲ್ಲ ಎಂದು ಕುಳಿತಿದ್ದರೆ, ಮತ್ತಲವರು ತಮಗೆ ಬರುವ ಕೆಲಸವನ್ನೇ ಆದಾಯವಾಗಿ ಪರಿಣಮಿಸುತ್ತಾರೆ. ಅಂತಹದ್ದೇ, ಒಬ್ಬ ಯುವಕನ ಸ್ಟೋರಿ ನಾವು ಹೇಳ್ತೀವಿ ಕೇಳಿ.
ಪಾನಿಪುರಿ ಭಾರತದಲ್ಲಿ ಸಾಕಷ್ಟು ಪ್ರಸಿದ್ಧ ಮತ್ತು ವ್ಯಾಪಕವಾಗಿ ಸೇವಿಸುವ ಬೀದಿ ಆಹಾರವಾಗಿದೆ. ಇವುಗಳನ್ನು ಬೀದಿ ಬದಿ ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಇವುಗಳನ್ನು ಮಾರುವುದರಿಂದ ಏನು ಲಾಭ ಇದ್ಯಾ? ಎಂದು ಪ್ರಶ್ನೆ ಮಾಡುವವರಿ ಪಾನಿಪುರಿ ಮಾರುವ ವ್ಯಾಪಾರಿಯ ದಿನದ ಆದಾಯ ತಿಳಿದು ಅಂತರ್ಜಾಲದಲ್ಲಿ ಚರ್ಚೆಯ ವಿಷಯವಾಗಿದೆ.
ಸೋಶಿಯಲ್ ಮೀಡಿಯಾ ಬಳಕೆ ದಾರರೊಬ್ಬರು ಪಾನಿಪುರಿ ಮಾರಾಟಗಾರ ಬಳಿ ಹೋಗಿ ‘ನಿಮ್ಮ ದೈನಂದಿನ ಸಂಬಳವನ್ನು ನಾನು ತಿಳಿಯಬಹುದೇ?’ ಎಂದು ಕೇಳುವುದು ಕೇಳುತ್ತಾರೆ. ವ್ಯಾಪಾರಿ 2,500 ರೂ. ‘ದಿನದ ಸಂಬಳ?’ ಎಂದು ಕೇಳಿದಾಗ ಹೌದು ಎಂದು ಉತ್ತರ ನೀಡಿದ್ದಾನೆ. ಇದನ್ನು ಮಾಸಿಕ ವೇತನ ಎಂದು ಲೆಕ್ಕ ಹಾಕಿದರೆ 75,000 ರೂ. ಆಗುತ್ತದೆ. ಎನ್ನುವುದನ್ನು ನಾವು ವಿಡಯೋದಲ್ಲಿ ನೋಡಬಹುದಾಗಿದೆ.
ಈ ಪಾನಿಪುರಿ ವ್ಯಾಪಾರಿಯ ಆದಾಯದ ಬಗ್ಗೆ ಅಂತರ್ಜಾಲದಲ್ಲಿ ಚರ್ಚೆ ಪ್ರಾರಂಭವಾಯಿತು. ಖಾಸಗಿ ಕಂಪನಿ ಉದ್ಯೋಗಿಗಳ ಮಾಸಿಕ ವೇತನಕ್ಕಿಂತ ಪಾನಿಪುರಿ ಬೈಯಾ ಆದಾಯ ಹೆಚ್ಚಿದೆ. ಎಂಬಿಎ ಓದುವುದು ಅನಗತ್ಯ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋ 4 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ