ಹಾಸನ:- ಬೇಲೂರಿನ ದೋಲನಮನೆ ಗ್ರಾಮದಲ್ಲಿ ಜಮೀನಿನ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆ ಕಿಡಿಗೇಡಿಗಳು ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಾಫಿ ಗಿಡಗಳನ್ನು ನಾಶಪಡಿಸಿದ ಘಟನೆ ಜರುಗಿದೆ.
ಹತ್ತಾರು ವರ್ಷಗಳಿಂದ ಬೆಳೆದಿದ್ದ ಕಾಫಿ ಗಿಡಗಳನ್ನು ಜೆಸಿಬಿಯಿಂದ ನಾಶ ಮಾಡಲಾಗಿದ್ದು, ಗ್ರಾಮದ ಕುರಂ ಎಂಬವರಿಗೆ ಸೇರಿದ ಕಾಫಿ ತೋಟವನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ.
ಗ್ರಾಮದ ಮೊಸೀನ್, ಜಾಹಿದ್, ಅಫನಾನ್ ಶಾಕೀರ್ ಎಂಬವರು ಕಾಫಿ ತೋಟವನ್ನು ನಾಶ ಮಾಡಿದ್ದಾರೆ ಎಂದು ಕುರುಂ ಆರೋಪಿಸಿದ್ದಾರೆ. ಇನ್ನೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.