ಬೆಂಗಳೂರು:- ಹಸುಗಳ ಕೆಚ್ಚಲು ಕೊಯ್ದ ನೀಚರನ್ನು ಒದ್ದು ಒಳಗಡೆ ಹಾಕದಿದ್ದರೇ ಶ್ರೀರಾಮ ಸೇನೆಯಿಂದ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಾಲ್ಕು ಹಸುವಿನ ಕೆಚ್ಚಲು ಕೊಯ್ದಿದ್ದಾರೆ. ಇದು ನೀಚ ಕೃತ. ಇಸ್ಲಾಮಿಕ್ ಶಕ್ತಿಯ ಪ್ರದರ್ಶನ ಆಗುತ್ತಿದೆ, ರಾಕ್ಷಸ ಕೃತ್ಯಕ್ಕೆ ಇದು ಉದಾಹರಣೆ. ಜಮೀರ್ ಅಹ್ಮದ್ ಇದು ನಿಮ್ಮ ಕ್ಷೇತ್ರದಲ್ಲಿ ಆಗಿದೆ. ಇದನ್ನು ತಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಕೆಚ್ಚಲು ಕೊಯ್ದ ನೀಚರನ್ನು ಒದ್ದು ಒಳಗಡೆ ಹಾಕದಿದ್ದರೇ ಶ್ರೀರಾಮ ಸೇನೆಯಿಂದ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೀಡಿದ್ದಾರೆ.
ಹಸು ಹಿಂದೂಗಳಿಗೆ ಅತ್ಯಂತ ಪೂಜ್ಯ ಪ್ರಾಣಿ. ಅದು ಬರೀ ಪ್ರಾಣಿ ಅಲ್ಲಾ, ಅದು ನಮಗೆ ಅನ್ನ ಹಾಕುತ್ತೆ, ಗೊಬ್ಬರ ಕೊಡುತ್ತೆ, ಔಷಧಿ ಕೊಡುತ್ತದೆ. ರೈತರ ಬೆನ್ನೆಲುಬು ಅದು. ಅದರ ಕೆಚ್ಚಲು ಕೊಯ್ದ ನೀಚರನ್ನು ಒದ್ದು ಒಳಗಡೆ ಹಾಕದಿದ್ದರೇ ಶ್ರೀರಾಮ ಸೇನೆಯಿಂದ ಜಮೀರ್ ವಿರುದ್ಧ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ, ಇದು ಎಚ್ಚರಿಕೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಇದೆ. ಕಾನೂನು ಇದ್ದರೂ ಕಾಂಗ್ರೆಸ್ನ ಮುಸ್ಲಿಂ ತುಷ್ಟೀಕರಣ ಹಿನ್ನೆಲೆಯಲ್ಲಿ ನಿರಂತರ ಗೋಹತ್ಯೆ ಆಗುತ್ತಿದೆ. ನಿರಂತರ ಕಸಾಯಿ ಖಾನೆಗೆ ಹಸು ಹೋಗುತ್ತಿವೆ. ಇವತ್ತು ಅದನ್ನು ತಡೆಯಬೇಕು. ಇವತ್ತು ಆದ ಘಟನೆ ನೋಡಲು ಆಗುತ್ತಿಲ್ಲ. ಅದು ನಮ್ಮ ತಾಯಿ. ಜಮೀರ್ಗೆ ಮಾನಾ ಮರ್ಯಾದೆ ಇದ್ದರೇ ರಾಕ್ಷಸಿ ಕೃತ್ಯ ಮಾಡಿದವರನ್ನು ಒದ್ದು ಒಳಗೆ ಹಾಕಿ. ಇಲ್ಲದಿದ್ದರೇ ಹೋರಾಟಕ್ಕೆ ಸಿದ್ದ ಎಂದು ಸವಾಲು ಹಾಕುತ್ತೇನೆ ಎಂದು ಗುಡುಗಿದರು.