ಮಂಗಳೂರು:- ದಲಿತ ಎಂಬ ಕೀಳರಿಮೆಯನ್ನು ತೆಗೆದು ಹಾಕಬೇಕು ಎಂದು ಮಾಜಿ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಪರಮೇಶ್ವರ್ ಎಲ್ಲಾ ಸರಿ ಕಣ್ರೀ ಆದರೆ..ದಲಿತ. ಇಂತಹ ಕೀಳರಿಮೆಯನ್ನು ತೆಗೆದು ಹಾಕಬೇಕಾದಲ್ಲಿ ನಾವೆಲ್ಲಾ ಒಗ್ಗಟ್ಟಾಗಬೇಕು. ಒಗ್ಗಟ್ಟಾಗದಿದ್ದಲ್ಲಿ ತುಳಿತಕ್ಕೊಳಗಾದ, ಶೋಷಿತ ಸಮಾಜ ಹಾಗೆಯೇ ಮುಂದುವರಿಯುತ್ತದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಮ್ಮ ರಕ್ಷಣೆಗೆ ಯಾರೂ ಬರುವುದಿಲ್ಲ. ಶಿಕ್ಷಣದಿಂದ ಮಾತ್ರ ಬಲಯುತರಾಗಲು ಸಾಧ್ಯ. ಆದ್ದರಿಂದ ಆದಿ ದ್ರಾವಿಡ ಸಮಾಜದ ಪ್ರತೀ ಮನೆಯಿಂದ ಓರ್ವನನ್ನಾದರೂ ಪದವೀಧರರನ್ನಾಗಿಸುವ ಸಂಕಲ್ಪವನ್ನು ಸಮುದಾಯದ ಪ್ರತಿಯೊಬ್ಬರೂ ಮಾಡಬೇಕು ಎಂದರು. ನಾನು ಆದಿದ್ರಾವಿಡ ಸಮುದಾಯದಿಂದ ಬಂದವನು. ಆದರೆ ನಾನು ಹೊರದೇಶಕ್ಕೆ ಹೋಗಿ ಶಿಕ್ಷಣ ಪಡೆಯುವಷ್ಟು ನನ್ನ ತಂದೆ ಶಿಕ್ಷಣದ ಬಗ್ಗೆ ಒಲವು ಇರಿಸಿಕೊಂಡಿದ್ದರು. ಬಳಿಕ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಿ 35 ವರ್ಷಗಳ ರಾಜಕೀಯ ಜೀವನ ನಡೆಸಿದ್ದೇನೆ. ಸಚಿವನಾಗಿದ್ದೇನೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಿ ಎಂಟು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಈ ರಾಜ್ಯದಲ್ಲಿ ಮೂರು ಬಾರಿ ಗೃಹ ಸಚಿವನಾಗಿ ದಾಖಲೆ ಬರೆದಿದ್ದೇನೆ. ಕಷ್ಟ ಎಲ್ಲರಿಗೂ ಇದ್ದದ್ದೇ. ಆದರೆ ಆ ಕಷ್ಟದಲ್ಲೂ ಎಲ್ಲರೂ ವಿದ್ಯಾವಂತರಾಗಬೇಕು. ಒಂದು ಹೊತ್ತು ಊಟ ಬಿಟ್ಟುಬಿಡಿ. ಅದೇ ಹಣದಿಂದ ನಿಮ್ಮ ಮನೆಯ ಮಗ ಅಥವಾ ಮಗಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದು ಕರೆ ನೀಡಿದರು.