ಕೋಲಾರ: ಬಾಲ ಕಾರ್ಮಿಕರ ರಕ್ಷಣೆಗೆ ತೆರಳಿದ್ದ ಕಾರ್ಮಿಕ ಇಲಾಖೆಯ ನಿರೀಕ್ಷರ ಬಳಿ ಹೋಟೆಲ್ ಮಾಲೀಕರು ಹೈಡ್ರಾಮ ನಡೆಸಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹೋಟೆಲ್ ಗಳ ಮೇಲೆ ದಾಳಿ ನಡೆಸಿದ್ದು, ಮೂವರು ಬಾಲ ಕಾರ್ಮಿಕರ ರಕ್ಷಣೆ ಮಾಡಿದ್ದಾರೆ.
ಗ್ರಾಮೀಣ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಿಸಬೇಕು: ಪ್ರಿಯಾಂಕ ಖರ್ಗೆ!
ಮಾಸ್ತಿಯ ಗೌಡ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ಬಾಲಕ ನೆಕ್ಪಾಲ್, ಹಾಗೂ ಅಪ್ರಾಪ್ತ ಬಾಲಕಿ ನಿಶಾ, ಸೇರಿದಂತೆ ಕಬಾಬ್ ಕಾರ್ನರ್ ನಲ್ಲಿ ಕಲಸ ಮಾಡ್ತಿದ್ದ ಬಾಲಕನ ರಕ್ಷಣೆ ಮಾಡಲಾಗಿದೆ. ಒರಿಸ್ಸಾದ ಮೂಲದ ಇವರು ಸುಮಾರು ದಿನಗಳಿಂದ ಈ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಮಾಸ್ತಿ ಭಾಗದಲ್ಲಿ ಕೆಲ ಹೋಟೆಲ್ ಗಳಲ್ಲಿ ಬಾಲ ಕಾರ್ಮಿಕರನ್ನು ಇಟ್ಟುಕೊಂಡಿದ್ದ ಮಾಹಿತಿ ಮೇರೆಗೆ ಮಾಲೂರು ತಾಲೂಕು ಕಾರ್ಮಿಕ ಇಲಾಖೆಯ ನಿರೀಕ್ಷಕರು ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಬಾಲಕರನ್ನು ರಕ್ಷಿಸಿದ್ದಾರೆ. ಈ ಸಂಬಂಧ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.