ಅಲ್ಲಿ ಬೆಚ್ಚನೆ ಮನೆಯಿತ್ತು.. ವೆಚ್ಚಕ್ಕೆ ಹೊನ್ನಿತ್ತು.. ಇಚ್ಚೆಯನ್ನಿರುವ ಮಡದಿ ಇದ್ಳು..ಆದ್ರೂ ಕೌಟುಂಬಿಕ ಕಲಹ ಆ ಸುಂದರ ಸಂಸಾರದಲ್ಲಿ ಟ್ರಾಜಿಡಿ ನಡೆದೇ ಹೋಯ್ತು..ಅಷ್ಟಕ್ಕೂ ಸ್ವರ್ಗದಂತಿದ್ದ ಆ ಮನೆಯಲ್ಲಿ ಆಗಿದ್ದೇನು. ಈ ಸ್ಟೋರಿ ನೋಡಿ.. ತುಂಬಿ ಹರಿಯುತ್ತಿರೋ ಭೀಮಾ ನದಿ ಆ ನದಿಯ ರಭಸಕ್ಕೆ ಯುವಕನ ಒದ್ದಾಟ ಅವನ ಪಕ್ಕದಲ್ಲಿ ಮತ್ತೊಬ್ಬ ಜೀವ ಉಳಿಸಿಕೊಳ್ಳಲು ಹರಸಾಹಸ ಇವರಿಬ್ಬರ ಒದ್ದಾಟ ಓರ್ವ ಮಹಿಳೆ ರಕ್ಷಣೆಗಾಗಿ. ಅಂದ ಹಾಗೆ ಈ ಘಟನೆ ನಡೆದದ್ದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಭೀಮಾ ನದಿಯಲ್ಲಿ, ಅಷ್ಟಕ್ಕೂ ಆ ಭೀಮಾ ನದಿಯಲ್ಲಿ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಮಹಿಳೆ ಹೆಸರು ಲಕ್ಷ್ಮೀ.
ಈಕೆ ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದ ನಿವಾಸಿ. ಈಕೆಯ ಆತ್ಮಹತ್ಯೆಗೆ ಯತ್ನಸಿದ್ದಕ್ಕೆ ಕಾರಣ ಕೌಟುಂಬಿಕ ಕಲಹ. ಗಂಡನಾದ ಶಿವಾನಂದ ನೊಂದಿಗೆ ನಿತ್ಯವೂ ಜಗಳವಾಡಿ ಬೇಸತ್ತು ಕೊನೆಗೆ ಸೊನ್ನ ಬ್ರಿಜ್ ನ ಭೀಮಾ ನದಿಗೆ ಹಾರಿದ್ದಾಳೆ. ಪತಿ ಶಿವಾನಂದ ಕೂಡಾ ನದಿಗೆ ಹಾರಿ ಹೆಂಡತಿಯ ರಕ್ಷಣೆ ಮಾಡಲು ಮುಂದಾಗಿದ್ದ. ಆದರೆ ಅಲ್ಲಿ ನಡೆದಿದ್ದೆ ಬೆರೆ. ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ ಶಿವಾನಂದ – ಲಕ್ಷ್ಮಿಯ ಸಂಸಾರದಲ್ಲಿ ಎಲ್ಲವೂ ಸರಿಯಿತ್ತು. ಆದರೆ ಬರು ಬರುತ್ತಾ ಆಸ್ತಿ ವಿಚಾರವನ್ನು ಹೆಂಡತಿ ಬಳಿ ಮುಚ್ಚಿಟ್ಟಿದ್ದ.
ಅಷ್ಟೇ ಅಲ್ಲ ತನ್ನ ಸಹೋದರನಿಗೆ ಆಸ್ತಿ ನೀಡಲು ತಯಾರಿ ನಡೆಸಿದ್ದ ಈ ವಿಚಾರ ತಿಳಿದು ಪತ್ನಿ ಲಕ್ಷ್ಮೀ ಗರಂ ಆಗಿದ್ದಳು. ಇದೆಲ್ಲವೂ ಬೇಡ ಅಂತಾ ತನ್ನ ಸಂಬಂಧಿಕರೊಂದಿಗೆ ಬೈಕ್ ಮೇಲೆ ಸೊನ್ನಕ್ಕೆ ಹೊರಟಿದ್ದಳು. ದಾರಿ ಮಧ್ಯೆ ಭೀಮಾ ಬ್ರಿಜ್ ಬಳಿ ಬೈಕ್ ನಿಲ್ಲಿಸುವಂತೆ ಹೇಳಿ ತಾನೊಬ್ಬಳೆ ಭೀಮಾ ನದಿಗೆ ಹಾರಿದಳು. ವಿಷಯ ತಿಳಿದ ಪತಿ ಶಿವಾನಂದ ಹಾಗೂ ಅವನ ಸಂಬಂಧಿಕ ಕೂಡಲೇ ನದಿ ಬಳಿ ಬಂದು ಲಕ್ಷ್ಮಿಯನ್ನು ಕಾಪಾಡಲು ಯತ್ನಿಸಿದರು.
ಆದರೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಇಬ್ಬರೂ ಸಾವನ್ನಪ್ಪಿದರು. ಇದೇ ವೇಳೆ ಮೀನು ಹಿಡಿಯಲು ಬೋಟ್ ತಂದಿದ್ದ ಮೀನುಗಾರರು ಲಕ್ಷ್ಮಿಯನ್ನು ಬಚಾವ್ ಮಾಡಿದ್ರು. ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿರೋ ಲಕ್ಷ್ಮಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ದುರಂತ ಹೇಗಿದೆ ಅಂದ್ರೆ ಸಾಯಲು ಬಂದವಳು ಬದುಕಿದಳು. ಬದುಕಿಸಲು ಬಂದವರು ಸಾವನ್ನಪ್ಪಿದರು. ಸಣ್ಣದೊಂದು ಕೌಟುಂಬಿಕ ಕಲಹ ಇಬ್ಬರ ಸಾವಿನೊಂದಿಗೆ ದುರಂತ ಅಂತ್ಯವಾಯಿತು.