ಕೋಲಾರ:- ಹೆಂಡತಿ ಬಿಟ್ಟು 2ನೇ ಮದುವೆಗೆ ಪತಿ ಮುಂದಾಗಿದ್ದು, ಯುವತಿ ಮೇಲೆ ಕಣ್ಣಾಕಿದ್ದವನನ್ನು ಪೋಷಕರು ಕೊಲೆಗೈದ ಘಟನೆ ಕೋಲಾರದ ನೂರ್ ನಗರದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.
ಸೆಂಟ್ರಿಂಗ್ ಮರ ಬಿದ್ದು ಬಾಲಕಿ ಸಾವು ಪ್ರಕರಣ: ಆರೋಪಿಗಳಿಗೆ ನೋಟಿಸ್ ಜಾರಿ!
ಉಸ್ಮಾನ್ ಕೊಲೆಯಾದ ದುರ್ದೈವಿ. ಆತ ತನ್ನ ಪ್ರೇಯಸಿ ಮನೆಗೆ ಹೋಗಿ ಬರುವಾಗ ಆಕೆಯ ಕುಟುಂಬಸ್ಥರು ಹಾಗೂ ಸ್ಥಳೀಯರು ಅಟ್ಟಾಡಿಸಿ ಹೊಡೆದಿದ್ದಾರೆ. ಬಳಿಕ ಪೊಲೀಸರು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.
ಉಸ್ಮಾನ್ ಕಳೆದೆ ಐದು ವರ್ಷಗಳ ಹಿಂದೆ ಜಬೀನ್ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆಕೆಗೆ ಕಿಡ್ನಿ ವಿಫಲವಾಗಿ ಅನಾರೋಗ್ಯದಿಂದ ಬಳಲುತ್ತಿದ್ದು, ಈ ವೇಳೆ ಆರೋಗ್ಯ ವಿಚಾರಿಸಲು ಬಂದಿದ್ದ ಜಬೀನಾ ಸಂಬಂಧಿ ಯುವತಿಯೊಂದಿಗೆ ಉಸ್ಮಾನ್ಗೆ ಪ್ರೀತಿಯಾಗಿದೆ. ಈ ವಿಷಯ ತಿಳಿದು ಆತನ ಪತ್ನಿ ಮಹಿಳಾ ಠಾಣೆಗೆ ದೂರು ನೀಡಿದ್ದಳು. ಬಳಿಕ ತನ್ನ ಪತಿಯಿಂದ ದೂರಾಗಿ ತವರು ಮನೆ ಸೇರಿದ್ದಳು.
ಹೀಗಿರುವಾಗ ಕಳೆದ ರಾತ್ರಿ ಉಸ್ಮಾನ್ ಯುವತಿ ಮನೆಗೆ ಹೋಗಿ ಅವರಿಗೆ ಅವಾಜ್ ಹಾಕಿದ್ದಾನಂತೆ. ಮಗಳನ್ನು ಮದುವೆ ಮಾಡಿಕೊಡಿ ಎಂದು ಹೇಳಿದ್ದಾನೆ. ಈ ವೇಳೆ ಒಂದಿಷ್ಟು ಜಗಳವಾಗಿದೆ. ಬಳಿಕ ಅಲ್ಲಿಂದ ಆತ ಹೊರಟಿದ್ದ ಉಸ್ಮಾನ್ ನನ್ನು ಹುಡುಗಿ ಕಡೆಯವರು ಹಿಂಬಾಲಿಸಿಕೊಂಡು ಹೋಗಿ ನೂರ್ ನಗರ ಸಮೀಪ ಹಿಡಿದು ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.