ಕೊಡಗು : ವಿರಾಜಪೇಟೆ ತಾಲೂಕಿನ ಬೆಟೋಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯಯನ್ನು ಗುಂಡು ಹೊಡೆದು ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ 9 ಗಂಟೆಗೆ ನಡೆದಿದೆ.
ಶಿಲ್ಪ ಸೀತಮ್ಮ (40)ಮೃತಪಟ್ಟ ದುರ್ದೈವಿ ಆಕೆಯ ಪತಿ ನಾಯಕಂಡ ಬೋಪಣ್ಣ (45) ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.
ನಿನ್ನೆ ರಾತ್ರಿ ಶಿಲ್ಪ ಬೇರೊಬ್ಬರ ದೂರವಾಣಿ ಕರೆ ಸ್ವೀಕರಿಸಿ ಮಾತನಾಡಿದ್ದನ್ನು ಆಕ್ಷೇಪಿಸಿದ ನಂತರ ಈ ವಿಚಾರವಾಗಿ ಜಗಳ ನಡೆದು ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಶಿಲ್ಪ ಸೀತಮ್ಮ 2012 ರಿಂದ 2017 ರವರೆಗೆ ಬೇಟೋಳಿ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆ ಸಲಿಸಿದ್ದರು.
ಕೊಲೆ ನಡೆಸಿದ ನಂತರ ಬೋಪಣ್ಣ ಪೊಲೀಸ್ ಠಾಣೆಗೆ ಕೋವಿಯೊಂದಿಗೆ ಶರಣಾಗಿದ್ದಾನೆ. ವಿರಾಜಪೇಟೆ ಹೊರವಲಯದ ಬೇಟೋಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ವಿರಾಜಪೇಟೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು.