ನವದೆಹಲಿ:- ಹಣಕ್ಕಾಗಿ ಗೆಳೆಯರಿಗೆ ಹೆಂಡತಿ ಮೇಲೆ ಅತ್ಯಾಚಾರವೆಸಗಲು ಗಂಡ ಹೇಳಿರುವ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಜರುಗಿದೆ.
ವಕ್ಫ್ ವಿರುದ್ಧ ತೊಡೆತಟ್ಟಿದ ಯತ್ನಾಳ್: ಪರಾಜಿತ ಅಭ್ಯರ್ಥಿಗಳೊಂದಿಗೆ ನಾಳೆ BY ವಿಜಯೇಂದ್ರ ಸಭೆ!
ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ತನ್ನ ಪತಿಯ ಇಬ್ಬರು ಸ್ನೇಹಿತರು ಕಳೆದ ಮೂರು ವರ್ಷಗಳಿಂದ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ತನ್ನ ಗಂಡನ ಗೆಳೆಯರು ಅತ್ಯಾಚಾರ ನಡೆಸುವಾಗ ಅದನ್ನು ವಿಡಿಯೋ ರೆಕಾರ್ಡ್ ಕೂಡ ಮಾಡಿಕೊಂಡಿದ್ದಾರೆ. ಆ ವಿಡಿಯೋಗಳನ್ನು ತನ್ನ ಗಂಡನಿಗೆ ಕಳುಹಿಸುತ್ತಿದ್ದರು ಎನ್ನಲಾಗಿದೆ.
ಈ ತಾನು 1 ತಿಂಗಳ ಗರ್ಭಿಣಿಯಾಗಿದ್ದೇನೆ. ತನ್ನ ಪತಿ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಆ ಮಹಿಳೆ ಬಹಿರಂಗಪಡಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 35 ವರ್ಷದ ಮಹಿಳೆ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದು, ಹೆಂಡತಿಯನ್ನು ತಮ್ಮ ಜೊತೆ ಲೈಂಗಿಕ ಕ್ರಿಯೆ ನಡೆಸಲು ಅವಕಾಶ ನೀಡಿದ್ದಕ್ಕಾಗಿ ನನ್ನ ಗಂಡನ ಸ್ನೇಹಿತರು ನನ್ನ ಗಂಡನಿಗೆ ಹಣ ನೀಡುತ್ತಿದ್ದಾರೆ ಎಂದು ಕೂಡ ಆರೋಪಿಸಿದ್ದಾರೆ. ಈ ವಿಷಯವನ್ನು ಯಾರೊಂದಿಗೂ ಹೇಳುವಂತಿಲ್ಲ ಎಂದು ನನ್ನ ಗಂಡನ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಆಕೆ ಹೇಳಿದ್ದಾರೆ.
ಆರೋಪಿಗಳಿಬ್ಬರೂ ತಮ್ಮ ಫೋನ್ಗಳಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು ಎಂದು ಮಹಿಳೆ ಹೇಳಿದ್ದು, ತನ್ನ ಪತಿ ಸೌದಿ ಅರೇಬಿಯಾದಲ್ಲಿ ಆ ವೀಡಿಯೊಗಳನ್ನು ನೋಡುತ್ತಿದ್ದರು ಎಂದು ಹೇಳಿದ್ದಾರೆ.