ಕೋಲಾರ: ಪತ್ನಿಯನ್ನು ಚುಡಾಯಿಸಿದ್ದಕ್ಕೆ ಪತಿ, ಯುವಕನೋರ್ವನನ್ನು ಹತ್ಯೆ ಮಾಡಿದ ಘಟನೆ ಕೋಲಾರದಜಮಾಲ್ ಷಾ ನಗರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ರೋಹಿದ್ ಅಲಿಯಾಸ್ ಅರ್ಬಾಜ್ (25) ಕೊಲೆಯಾದವನು. ಅಂಬ್ಜದ್ ಕೊಲೆ ಮಾಡಿದ ಆರೋಪಿ. ಕಳೆದ ಕೆಲವು ದಿನಗಳಿಂದ ಅಂಬ್ಜದ್ ಪತ್ನಿಯ ಮೇಲೆ ಅರ್ಬಾಜ್ ಕಣ್ಣು ಹಾಕಿದ್ದ.
ATMನಲ್ಲಿ ಹರಿದ ನೋಟುಗಳು ಬಂದ್ರೆ ಏನ್ ಮಾಡ್ಬೇಕು.? RBI ನಿಯಮಗಳೇನು ಗೊತ್ತಾ..?
ಈ ಮೊದಲು ಎರಡು ಮೂರು ಬಾರಿ ಇದೇ ವಿಚಾರವಾಗಿ ಗಲಾಟೆ ನಡೆದಿತ್ತು. ಶುಕ್ರವಾರ ರಾತ್ರಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಅಂಬ್ಜದ್ ಚಾಕುವಿನಿಂದ ಅರ್ಬಾಜ್ನ ಎದೆಗೆ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಆರೋಪಿ ಅಂಬ್ಜದ್ನನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.