ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬೆಟೋಳಿ ಎಂಬ ಗ್ರಾಮದಲ್ಲಿ ಪತ್ನಿಯನ್ನೇ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ನಡೆದಿದೆ. ಶಿಲ್ಪ (34) ಮೃತ ರ್ದುದೈವಿ.
ವಾಲ್ಮೀಕಿ ನಿಗಮದ ಹಗರಣ: ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದ ಶೆಟ್ಟರ್!
8 ವರ್ಷದ ಹಿಂದೆ ಶಿಲ್ಪ ಹಾಗೂ ಬೋಪಣ್ಣ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಯ ಸಂಕೇತ ಎಂಬಂತೆ ಇಬ್ಬರು ಮುದ್ದಾದ ಮಕ್ಕಳು ಇದ್ದರು. ಅದ್ಯಾಕೋ ಗೊತ್ತಿಲ್ಲ ಅವರ ಕುಟುಂಬದಲ್ಲಿ ಬಿರುಗಾಳಿ ಎದ್ದಿತ್ತು. ಇದರಿಂದ ಇಬ್ಬರೂ ಕೂಡ ಬೇರೆ ಬೇರೆ ಆಗಿದ್ದರಂತೆ. ಆದರೆ, ಒಂದೆ ವಾಸವಾಗಿದ್ದ ಅವರು, ಪ್ರತ್ಯೇಕ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರು. ಬಳಿಕ ಇಬ್ಬರ ಕಟುಂಬದಲ್ಲಿ ಬಿರುಕು ಮೂಡಿದ್ದು, ವಿಚ್ಚೇದನಕ್ಕೆ ಅರ್ಜಿಕೂಡ ಹಾಕಿ ಕಾಯುತ್ತಿದ್ದರು.
ಶುಕ್ರವಾರ ರಾತ್ರಿ ಮೃತ ಶಿಲ್ಪ ಮೊಬೈಲ್ನಲ್ಲಿ ಬೇರೆ ವ್ಯಕ್ತಿಯ ಜೊತೆಯಲ್ಲಿ ಸಂಭಾಷಣೆ ನಡೆಸುತ್ತಿದ್ದಳಂತೆ, ಮಾರನೇ ದಿನವೂ ಬೆಳಗ್ಗೆ 8.45ರ ಸಮಯದಲ್ಲಿ ಮತ್ತೆ ಆ ವ್ಯಕ್ತಿಯ ಜೊತೆಯಲ್ಲಿ ಮಾತುಕತೆ ನಡೆಸಿದ್ದಳಂತೆ. ಅದೇ ಸಮಯದಲ್ಲಿ ಅಡಿಗೆ ಮನೆಗೆ ಹೋದ ಗಂಡ ಬೋಪಣ್ಣ, ಕೋವಿ ಸಮೇತ ಆಗಮಿಸಿ ಶಿಲ್ಪಾಳ ಎದೆಗೆ ಗುಂಡು ಹಾರಿಸಿ ಕೊಂದು ಹಾಕಿದ್ದಾನೆ.
ನಂತರ ಕೋವಿ ಸಮೇತ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಶರಣಾಗಿದ್ದಾನೆ. ವಿರಾಜಪೇಟೆ ಮಲಬಾರ್ ರಸ್ತೆಯ ಆರ್ಜಿಯಲ್ಲಿ ಸ್ವಂತ ಸರ್ವೀಸ್ ಸ್ಟೇಷನ್ ಹೊಂದ್ದಿದ್ದ ಬೋಪಣ್ಣ, ಹದಿನೆಂಟು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಪ್ರಥಮ ಪಿಯುಸಿ ಹಾಗೂ ಏಳನೇ ತರಗತಿ ಓದುವ ಎರಡು ಹೆಣ್ಣು ಮಕ್ಕಳು ಇದ್ದಾರೆ. ಅಮ್ಮನನ್ನ ಕಳೆದುಕೊಂಡು ಮಕ್ಕಳಿಬ್ಬರು ತಬ್ವಲಿಗಳಾಗಿದ್ದಾರೆ.