ನವದೆಹಲಿ:- ಉತ್ತರ ಪ್ರದೇಶದ ಆಗ್ರಾದ ಶಂಭು ನಗರದಲ್ಲಿ ಆಘಾತಕಾರಿ ಘಟನೆ ಜರುಗಿದೆ. ನಡುರಸ್ತೆಯಲ್ಲೇ ಹೆಂಡತಿಯನ್ನು ಬರ್ಬರವಾಗಿ ಗಂಡ ಕೊಲೆಗೈದ ಘಟನೆ ಜರುಗಿದೆ.
ಎಸ್.ಎಂ ಕೃಷ್ಣರವರು ಅವರನ್ನು ಕಳೆದುಕೊಂಡಿದ್ದು ದೇಶಕ್ಕೆ ನಷ್ಟ: ಅಭಿಷೇಕ್ ಅಂಬರೀಶ್!
ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬರುವಂತೆ, ಪತಿ ಕೇವಲ 18 ಸೆಕೆಂಡುಗಳಲ್ಲಿ 11 ಬಾರಿ ಹೆಂಡತಿಯ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾನೆ. ಇಷ್ಟಾದರೂ ನೆರೆಹೊರೆಯವರು ಪ್ರೇಕ್ಷಕರಂತೆ ನಿಂತು ನೋಡುತ್ತಿದ್ದರೇ ವಿನಃ ಆ ಮಹಿಳೆಯನ್ನು ರಕ್ಷಿಸಲು ಬರಲಿಲ್ಲ.
ರಮಾ ದೇವಿಯವರ ಪತಿ ದಧಿಚ್ ಇತ್ತೀಚೆಗೆ ತಮ್ಮ ಕುಟುಂಬದ ಮನೆಯನ್ನು ಮಾರಾಟ ಮಾಡುವಂತೆ ರಮಾ ದೇವಿ ಮೇಲೆ ಒತ್ತಡ ಹೇರುತ್ತಿದ್ದು, ಇದಕ್ಕೆ ಆಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಭಿನ್ನಾಭಿಪ್ರಾಯವು ನಾಲ್ಕು ತಿಂಗಳ ಹಿಂದೆ ಹಿಂದಿನ ಜಗಳಕ್ಕೆ ಕಾರಣವಾಯಿತು ಎನ್ನಲಾಗಿದೆ.