ಬೆಂಗಳೂರು: ಆಕೆಗೆ ಆತ ರೌಡಿ ಶೀಟರ್ ಅನ್ನೋದು ಗೊತ್ತಿರ್ಲಿಲ್ಲ ಅನ್ಸುತ್ತೆ. ಮನೆ ಬಾಡಿಗೆ ಅಂತ ಬಂದವನ ಜೊತೆಗೆ ಸಲುಗೆ ಬೆಳೆಸಿದ್ದ ಗೃಹಿಣಿ ಕೊನೆಗೆ ಆತನ ಪ್ರೀತಿಯ ತೆಕ್ಕೆಗೆ ಬಿದ್ದಿದ್ಳು. ಗಂಡ ಮಕ್ಕಳು ಇದ್ರು ಆ ರೌಡಿಯ ಪ್ರೀತಿ ಮಾತಿಗೆ ಕಟು ಬಿದ್ದು ಗೃಹಿಣಿ ತನ್ನ ಪ್ರೀತಿ ಜೊತೆಗೆ ದೇಹವನ್ನು ಆತನಿಗೆ ದಾರೆ ಎರೆದಿದ್ಳು. ನಿಧಾನವಾಗಿ ತಾನು ಹಾಲೆರೆದಿದ್ದು ಹಾವಿಗೆ ಅನ್ನೋದು ಅನ್ನೋದು ಗೊತ್ತಾಗಿತ್ತು. ಆಗ ಮಹಿಳೆ ಆ ರೌಡಿಯನ್ನ ಅವೈಡ್ ಮಾಡಿದ್ದಕ್ಕೆ ಚಾಕು ತೋರಿಸಿ ಮಹಿಳೆ ಬಳಿ ಕಾರು ಒಡವೆ ರಾಬರಿ ಮಾಡಿ ಪರಾರಿಯಾಗಿದ್ದಾನೆ.
ರೌಡಿಶೀಟರ್ ಸುರೇಶ್ ಅಲಿಯಾಸ್ ಕುಣಿಗಲ್ ಸೂರಿಯಿಂದ ಮಹಿಳೆಯಿಂದ ಸುಲಿಗೆ ಮಾಡಿದ್ದು ಈ ಬಗ್ಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಣಿಗಲ್ ಸೂರಿ ವಿರುದ್ಧ ಮಾಜಿ ಯೋಧನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಳೆ ಜೊತೆಗೆ ಸಲುಗೆಯಿಂದ ದೈಹಿಕ ಸಂಪರ್ಕ ಬೆಳಸಿ, ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಹಣ ನೀಡದಾಗ ಆ ಫೋಟೋ ಆಕೆ ಪತಿ ಮತ್ತು ಸಂಬಂಧಿಕರಿಗೆ ಕಳುಹಿಸಿ ಮಹಿಳೆ ಮಾನಹಾನಿ ಮಾಡಿದ್ದಾನೆ.
ಕಪ್ಪು ಬಳೆಯನ್ನು ಏಕೆ ಧರಿಸಬಾರದು..? ಅದನ್ನು ಧರಿಸಿದರೆ ಏನಾಗುತ್ತದೆ..? ಇಲ್ಲಿದೆ ಉತ್ತರ
ಹಲವು ವರ್ಷಗಳಿಂದ ಮಹಿಳೆ ಬಿಲ್ಡಿಂಗ್ ನಲ್ಲಿ ಲೀಸ್ ಗೆ ಇದ್ದ ಸೂರಿ ನಾನು ಓಲಾ ಡ್ರೈವರ್ ಅಂತ ಪರಿಚಯ ಮಾಡಿಕೊಂಡಿದ್ದ. ಕಳೆದ ಮೂರು ವರ್ಷದ ಹಿಂದೆ ಸೂರಿ ಕೇಸ್ ಒಂದರಲ್ಲಿ ಜೈಲು ಸೇರಿದ್ದ. ಆಗಲೆ ಸೂರಿ ರೌಡಿ ಅಂತ ಗೊತ್ತಾಗಿದ್ದಂತೆ. ಮನೆ ಜೈಲಿನಿಂದ ಕೂತು ಮಹಿಳೆಗೆ ಕಾಲ್ ಮಾಡಿ ಸಲುಗೆ ಬೆಳಸಿದ್ದಾನೆ. ಸಂತ್ರಸ್ತೆ ಪತಿ ಹಾಗೂ ಮಕ್ಕಳು ಇಲ್ಲದಾಗ ಮನೆಗೆ ಬಂದು ಹೋಗ್ತಿದ್ದ ಸೂರಿ ಮೊಬೈಲ್ ನಲ್ಲಿ ಹಲವು ಮಹಿಳೆಯರು ವಿಡಿಯೋ ಫೋಟೋ ಇರೋದನ್ನ ಸಂತ್ರಸ್ತೆ ನೋಡಿ ಗಲಾಟೆ ಮಾಡಿ ಆತನನ್ನ ಅವೈಡ್ ಮಾಡಿದ್ದಾಳೆ. ಆಗ ಮಹಿಳೆಯ ಫೋಟೋಗಳನ್ನ ತೋರಿಸಿ ಬೆದರಿಸಿ ಹಣ ಕೂಡ ಪಡೆಯುತ್ತಿದ್ನಂತೆ.
ನವೆಂಬರ್ 30ರಂದು ವಾಲ್ಮಿಕಿ ಸರ್ಕಲ್ ಬಳಿ ಮಹಿಳೆ ಮನೆಗೆ ಹೋಗ್ತಿದ್ದಾಗ ಅಡ್ಡ ಹಾಕಿದ ಸೂರಿ ಕಾಲ್ ರಿಸೀವ್ ಮಾಡ್ತಿಲ್ಲ ಯಾಕೆ ಎಂದು ಪ್ರಶ್ನಿಸಿ, ಹಣಕ್ಕೆ ಡಿಮ್ಯಾಂಡ್ ಮಾಡಿದ್ನಂತೆ. ಮಹಿಳೆ ಹಣವಿಲ್ಲ ನನ್ನ ಬಳಿ ಎಂದಾಗ ಚಾಕು ತೋರಿಸಿ ಬೆದರಿಸಿ ಮೊಬೈಲ್, ಕಾರು ಹಾಗೂ 18 ಗ್ರಾಂ ಚಿನ್ನದ ಓಲೆ ಕಿತ್ತುಕೊಂಡ ಹೋಗಿರೋದಾಗಿ ಎಫ್ ಐ ಆರ್ ದಾಖಲಾಗಿದೆ. ಇನ್ನೂ ಸೂರಿ ಹುಡುಕಾಟದಲ್ಲಿ ಬ್ಯಾಡರಹಳ್ಳಿ ಪೊಲೀಸ್ರು ತಲಾಶ್ ನಡೆಸಿದ್ರೆ ಈ ಮಧ್ಯೆ ತುಮಕೂರು ಕೋರ್ಟ್ ಆವರಣದಲ್ಲಿ ತನ್ನ ಅಣ್ಣನಿಗೆ ಚಾಕು ಇರಿದು ಜೈಲು ಸೇರಿದ್ದಾನೆ. ಸದ್ಯ ಬಾಡಿ ವಾರೆಂಟ್ ಮೇಲೆ ಸೂರಿಯನ್ನ ಕಸ್ಟಡಿಗೆ ಪಡೆಯಲು ಬ್ಯಾಡರಹಳ್ಳಿ ಪೊಲೀಸ್ರು ತಯಾರಿ ನಡೆಸಿದ್ದಾರೆ.