ಬೆಂಗಳೂರು: ರಾಜ್ಯದ ಜಾತಿಗಣತಿ ವರದಿ ಬಿಡುಗಡೆಯ ವಿರೋಧದ ಕಾವು ದೊಡ್ಡ ಮಟ್ಟದಲ್ಲಿ ಜೋರಾಗ್ತಿದೆ. ಒಕ್ಕಲಿಗರ ವಿರೋಧದ ನಂತರ ರಾಜ್ಯದ ಅತೀ ದೊಡ್ಡ ಸಮುದಾಯ ಜಾತಿ ವರದಿ ವಿರೋಧಿಸಿ ಸಹಿ ಸಂಗ್ರಹಿಸಿದೆ. ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೇ ಅಖಾಡಕ್ಕಿಳಿದಿದ್ದು ಸಿಎಂ ಸಿದ್ದರಾಮಯ್ಯಗೆ ಪತ್ರ ಕೊಟ್ಟು ಸಮೀಕ್ಷೆ ಅವೈಜ್ಞಾನಿಕ ಅಂತ ಕಿಡಿ ಕಾರಿದ್ದಾರೆ. ಜಾತಿಗಣತಿ ವರದಿ ಪಡೆಯಲು ಉತ್ಸುಕರಾಗಿರೋ ಸಿದ್ದರಾಮಯ್ಯಗೆ ಶಾಮನೂರು ಬಂಡಾಯ ನುಂಗಲಾರದ ಬಿಸಿತುಪ್ಪವಾಗ್ತಿದೆ….
ಬಿಹಾರದಲ್ಲಿ ಜಾತಿಗಣತಿ ವರದಿ ಬಿಡುಗಡೆಯಾದ್ಮೇಲೆ ರಾಜ್ಯದಲ್ಲೂ ಜಾತಿ ವರದಿ ಬಿಡುಗಡೆಗೆ ಒತ್ತಡ ಕೇಳಿಬಂದಿತ್ತು. 2015 ಸಿಎಂ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಕಾಂತರಾಜ್ ನೇತೃತ್ವದಲ್ಲಿ ಸಿದ್ದರಾಮಯ್ಯ ಮಾಡಿಸಿದ್ದ ಶೈಕ್ಷಣಿಕ ಮತ್ತು ಸಾಮಾಜಿಕ ವರದಿಯನ್ನೇ ಜಾತಿಗಣತಿ ವರದಿಯನ್ನಾಗಿ ಪಡೆಯುತ್ತೇವೆ ಅಂತ ಸಿಎಂ ಸಿದ್ದರಾಮಯ್ಯ ಹೇಳ್ತಿದ್ದಂತೆ. ಜಾತಿಗಣತಿಗೆ ವಿರೋಧಗಳು ಶುರುವಾದ್ರು ಮೊದಲು ಶುರುಮಾಡಿದ್ದೆ ರಾಜ್ಯದ ಪ್ರಬಲ ಸಮುದಾಯಗಳಲ್ಲಿ ಒಂದಾದ ಒಕ್ಕಲಿಗರು. ಸಿದ್ದು ಸರ್ಕಾರದಲ್ಲಿ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ಅವ್ರೆ ಜಾತಿ ವರದಿಗೆ ವಿರೋಧ ವ್ಯಕ್ತಪಡಿಸಿದ್ರು, ಇದಾದ್ಮೇಮೇಲೆ ಮೊನ್ನೆ ಮೊನ್ನೆಯಷ್ಟೇ ಬೆಳಗಾವಿ ಅಧಿವೇಶನದಲ್ಲಿ ಶಾಸಕ ವಿನಯ್ ಕುಲಕರ್ಣಿ ವರದಿ ಅವೈಜ್ಞಾನಿಕ ಅಂತ ಸಿಎಂ ಗೆ ಪತ್ರ ಕೊಟ್ಟಿದ್ರಿ. ಇದೀಗ ಈ ಜಾತಿ ವರದಿಗೆ ರಾಜ್ಯದ ಅತೀ ದೊಡ್ಡ ಪ್ರಬಲ ಸಮುದಾಯ ವಿರೋಧ ವ್ಯಕ್ತಪಡಿಸಿದೆ…..
ರಾಜ್ಯದ ಪ್ರಬಲ ಸಮುದಾಯ ಅತೀ ದೊಡ್ಡ ಓಟ್ ಬ್ಯಾಂಕ್ ಅಂತ ಕರೆಸಿಕೊಂಡಿರುವ ಲಿಂಗಾಯತ ಸಮುದಾಯವೇ ಜಾತಿ ವರದಿ ವಿರುದ್ಧ ತಿರುಗಿ ಬಿದ್ದಿದೆ.
ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ 60 ಜನ ಲಿಂಗಾಯತ ಸಚಿವರು ಸೇರಿದಂತೆ ಶಾಸಕರ ಸಹಿ ಸಂಗ್ರಹಿಸಿ ಸಿಎಂ ಸಿದ್ದರಾಮಯ್ಯ ಗೆ ವರದಿ ವಿರೋಧದ ಪತ್ರ ಕೊಟ್ಟಿದ್ದಾರೆ. ಜನಗಣತಿ ವರದಿ ಅವೈಜ್ಞಾನಿಕವಾಗಿದ್ದು, ಹೊಸದಾಗಿ ಮತ್ತು ವೈಜ್ಞಾನಿಕ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುವಂತೆ ಸಿಎಂಗೆ ಒತ್ತಾಯಿಸಿದ್ದಾರೆ…..
ಇನ್ನು ಶಾಮನೂರು ವಿರೋಧದ ಪತ್ರದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಜಾತಿ ಜನಗಣತಿ ವರದಿ ಬರುವ ಮುನ್ನವೇ ವೈಜ್ಞಾನಿಕವಲ್ಲ ಎನ್ನುವುದು ಸರಿಯಲ್ಲ.ವರದಿ ಕೊಟ್ಟ ಮೇಲೆ ಸ್ವೀಕಾರ ಮಾಡುವ ಪ್ರಶ್ನೆ ಉದ್ಭವವಾಗುತ್ತದೆ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ವರದಿ ಕೊಟ್ಟಿಲ್ಲ. ಕೊಡಲು ಬಂದಾಗ ವಿಚಾರ ಮಾಡುತ್ತೇವೆ. ವರದಿ ಬರದೆ, ಅದರಲ್ಲಿ ಏನಿದೆ ಎಂದು ತಿಳಿಯದೇ ಊಹಾಪೋಹದ ಮೇಲೆ ನಿರ್ಧಾರ ಮಾಡುತ್ತಿದ್ದಾರೆ ವರದಿ ಬರಲಿ ನೋಡೋಣ ಎಂದರು ಅಂತ ಶಾಮನೂರು ಶಿವಶಂಕರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ ಸಿಎಂ…
ಶಾಮನೂರು ಪತ್ರಕ್ಕೆ ಗರಂ ಆಗಿರುವ ಗೃಹ ಸಚಿವ ಜಿ. ಪರಮೇಶ್ವರ್ ಸುಮಾರು 168 ಕೋಟಿ ರೂ ಖರ್ಚು ಮಾಡಿ ಸಮೀಕ್ಷೆ ಮಾಡಿದ್ದಾರೆ. ಬಹಳ ಜನ ಕೇಳುತ್ತಿರೋದು ಸಮೀಕ್ಷೆ ವರದಿ ಬಹಿರಂಗ ಪಡಿಸಿ ಅಂತ
ವರದಿಪ್ರಕಾರ ಯಾವ ಜಾತಿ ಎಷ್ಟು ಇದೆ ಎಂದು ಬಹಿರಂಗ ಪಡಿಸಿ ಎಂದು ಕೇಳುತ್ತಿದ್ದಾರೆ. ಸಮಾಜದಲ್ಲಿ ಇಂತಹವೆಲ್ಲಾ ನಡೆಯುತ್ತಿರುತ್ತವೆ ಆದ್ರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ. ವರದಿಯನ್ನೇ ತರಬಾರದು ಅಂದ್ರೆ ಸರಿ ಕಾಣಿಸಲ್ಲ ಅಂತ ಗರಂ ಆಗಿದ್ದಾರೆ ಪರಂ…
ಒಟ್ನಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಲಿಂಗಾಯತ ಸಮುದಾಯವೇ ಜಾತಿಗಣತಿ ವಿರೋಧಿಸ್ತಿರೋದು ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಲಿಂಗಾಯತ ಮಹಾಸಭಾ ಅಧ್ಯಕ್ಷರೇ ಅಖಾಡಕ್ಕಿಳಿದಿರೋದು ಪ್ರತ್ಯೇಕ ನಾಯಕತ್ವದ ಕೂಗಿಗೂ ಧ್ವನಿಯಾಗ್ತಿದೆ. ರಾಜ್ಯದ 2 ಬಲಿಷ್ಠ ಸಮುದಾಯಗಳ ವಿರೋಧದ ಮಧ್ಯೆಯೂ ಸಿಎಂ ಸಿದ್ದರಾಮಯ್ಯ ಜಾತಿಗಣತಿ ವರದಿಯನ್ನು ಪಡಿತಾರಾ ಎಂಬುದನ್ನ ಕಾದುನೋಡಬೇಕಿದೆ…..