ಚಿಕ್ಕಮಗಳೂರು:- ಮದುವೆ ಮಂಟಪದಲ್ಲಿ ಸೂತಕದ ಛಾಯೆ ಆವರಿಸಿ ಬಿಟ್ಟ ಕರುಣಾಜನಕ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ಜರುಗಿದೆ.
ಸತ್ತ ಹುಡುಗನಿಗೆ ಸಿಕ್ತು ಶಾಂತಿ: ಕೇರಳದ ವಿಷ ಕನ್ಯೆಗೆ ಕೊನೆಗೂ ಮರಣದಂಡನೆ ವಿಧಿಸಿದ ಕೋರ್ಟ್!
ಚಂದ್ರು ತನ್ನ ಮಗಳ ಮದುವೆಯನ್ನು ಭರ್ಜರಿಯಾಗಿ ಮಾಡಿ ಕುಟುಂಬಸ್ಥರ ಬಳಿ ಶಹಬ್ಬಾಸ್ ಅನ್ನಿಸಿಕೊಳ್ಳುವ ಆಸೆ ಹೊಂದಿದ್ದರು. ಮೊದಲ ಮಗಳ ಮದುವೆ ಸಮಯಕ್ಕೆ ಕೋವಿಡ್ ಪಾಸಿಟಿವಿ ಆಗಿದ್ದು ಮದುವೆ ನೋಡಲು ಆಗಿರಲಿಲ್ಲ. 2ನೇ ಮಗಳು ಲವ್ ಮ್ಯಾರೇಜ್ ಆಗಿದ್ದಳು. ಇದೀಗ ಕೊನೇ ಮಗಳ ಮದುವೆಯನ್ನು ನೋಡೋ ಭಾಗ್ಯ ಕೂಡ ಚಂದ್ರುಗೆ ಸಿಗಲೇ ಇಲ್ಲ.
ಈ ಹುಡುಗಿ ಖುಷಿಯಾಗಿಯೇ ಹಸೆಮಣೆ ಏರಿದ್ದಳು. ಅಪ್ಪ ಸುಸ್ತಾಗಿ ಆಸ್ಪತ್ರೆಯಲ್ಲಿದ್ದಾರೆ ಎನ್ನುವ ವಿಷಯ ಮಾತ್ರ ತಲೆಯಲ್ಲಿ ಇತ್ತು. ಮದುವೆ ಮುಗಿಸಿಕೊಂಡು ನೇರವಾಗಿ ಹೋಗಿ ಆ ಸಂಭ್ರಮವನ್ನು ಹೇಳಿಕೊಳ್ಳೋಣ ಅಂತಾನೆ ಮದುವೆ ಮುಗಿಯೋದನ್ನೇ ಕಾದಿದ್ದಳು. ಮದುವೆಯೂ ಮುಗಿಯಿತು ಅಪ್ಪ ಎಲ್ಲಿ ಅಂದಾಗಲೇ ಅವಳಿಗೆ ಬರಸಿಡಿಲು ಬಡಿಯಿತು.
ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಚಂದ್ರು, ಮಮತಾಳ ಮೂರನೇ ಮಗಳು ದೀಕ್ಷಿತಾಳ ಮದುವೆಯನ್ನು ಕಡೂರು ತಾಲೂಕಿನ ಬೀರೂರಿನ ಯತಿರಾಜ್ ಜೊತೆಗೆ ನಿಶ್ವಿಯವಾಗಿತ್ತು. ನಿನ್ನೆ ಮನೆಯಿಂದ ವಧುವನ್ನ ಕಲ್ಯಾಣ ಮಂಟಪಕ್ಕೆ ಕರೆದೊಯ್ಯಲು ಮುಂದಾಗುತ್ತಿದ್ದಂತೆ ಸಂಬಂಧಿಕರಿಗೆ ಒಂದು ಮಾಹಿತಿ ಸಿಕ್ಕಿದೆ. ವಧುವಿನ ತಂದೆ ಚಂದ್ರು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹಾಗೂ ಅವ್ರ ಜೊತೆ ಇದ್ದ ವ್ಯಕ್ತಿಗೆ ಗಾಯವಾಗಿದೆ ಅನ್ನೋದು. ಆಗ ಸಂಬಂಧಿಕರು ತೆಗೆದುಕೊಂಡ ನಿರ್ಧಾರ ಏನಂದ್ರೆ ಮದುವೆ ಮೊದಲು ನಂತ್ರ ಸಾವಿನ ಸುದ್ದಿ.
ಮಗಳು ಕಲ್ಯಾಣ ಮಂಟಪಕ್ಕೆ ಹೋಗುವಾಗಲೇ ಅಪ್ಪನ ಆಶೀರ್ವಾದ ಬೇಕು ಅಂದಿದ್ದಾಳೆ. ಆಗ ಸಂಬಂಧಿಕರು ನೋವಿದ್ರು ನಗುನಗುತ್ತಲೇ ಅಪ್ಪನಿಗೆ ಹುಷಾರಿಲ್ಲ ಸುಸ್ತಾಗಿದ್ದಾರೆ ಅಂತಾ ಹೇಳಿ ಕರ್ಕೊಂಡು ಹೋಗಿದ್ದಾರೆ
ನಿನ್ನೆ ರಾತ್ರಿ ಅರತಕ್ಷತೆಯೂ ನಡೆಯಿತು. ಕರೆದಿದ್ದ ಸಂಬಂಧಿಕರು ಬಂದು ಮದುವೆ ಶುಭಾಶಯವನ್ನೂ ಕೊರಿದರು. ಅಪ್ಪನ ಹತ್ರ ಆಮೇಲೆ ಹೋಗಿ ಆಶೀರ್ವಾದ ಪಡೆಯೋಣ ಅಂತಾನೇ ತಾಳಿ ಕಟ್ಟಿಸಿಕೊಂಡು ದೀಕ್ಷಿತ ಹೊಸ ಜೀವನಕ್ಕೆ ಕಾಲಿಟ್ಟಳು
ಇಷ್ಟೆಲ್ಲಾ ಆದ ಕೆಲ ಕ್ಷಣದಲ್ಲಿಯೇ ಸಿಕ್ಕಿದ್ದು ಅಪ್ಪ ಇಲ್ಲ ಅಪ್ಪ ಬಾರದ ಲೋಕಕ್ಕೆ ಹೋಗಿದ್ದಾನೆ ಅನ್ನೋ ಶಾಕಿಂಗ್ ಸುದ್ದಿ. ಅಪ್ಪನ ಸಾವಿನ ನಡುವೆಯೇ ಹೊಸ ಜೀವನಕ್ಕೆ ಕಾಲಿಟ್ಟಿದ್ದು ಕ್ಷಣಾರ್ಧದಲ್ಲಿಯೇ ಕಲ್ಯಾಣ ಮಂಟಪವೇ ಶೋಕಸಾಗರದಲ್ಲಿ ಮುಳುಗಿ ಹೋಗುವಂತೆ ಮಾಡಿತು.