Facebook Twitter Instagram YouTube
    ಕನ್ನಡ English తెలుగు
    Thursday, November 30
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ರಾತ್ರಿ ಅಂಗಡಿ ಬಂದ್ ಮಾಡಿಸಲು ಬಂದ PSI ಮೇಲೆಯೇ ಕೈ ಮುಖಂಡನ ದರ್ಪ..! ವಿಡಿಯೋ

    AIN AuthorBy AIN AuthorNovember 21, 2023
    Share
    Facebook Twitter LinkedIn Pinterest Email

    ದಾವಣಗೆರೆ: ದಾವಣಗೆರೆಯ ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಆಪ್ತ ಅಯುಬ್ ಪೈಲ್ವಾನ್ ಸೇರಿದಂತೆ ಆತನ ಕುಟುಂಬಸ್ಥರು ಪೊಲೀಸರ ಮೇಲೆಯೇ ದರ್ಪ ತೋರಿದ್ದಾರೆ. ನವೆಂಬರ್ 16 ರಾತ್ರಿ ನಗರದ ಅರಳಿಮರ ವೃತ್ತದಲ್ಲಿ ಈ ಘಟನೆ ನಡೆದಿದೆ. ರಾತ್ರಿ 11 ಗಂಟೆ ಬಳಿಕ ನಗರದಲ್ಲಿನ ಅಂಗಡಿ ಮುಂಗಟ್ಟುಗಳನ್ನ ಮುಚ್ಚುವಂತೆ ನಿಯಮವಿದೆ. ಆದರೆ, ರಾತ್ರಿ 11.30ರ ಸುಮಾರಿನಲ್ಲಿ ಅರಳಿ ವೃತ್ತದಲ್ಲಿ ಅಂಗಡಿಯ ಮುಂದೆ ಬೈಕ್ ನಿಲ್ಲಿಸಿಕೊಂಡು ಕೆಲವರು ಯುವಕರು ಕುಳಿತುಕೊಂಡಿದ್ದರು.

    ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಬೀಟ್ ಸಿಬ್ಬಂದಿ ಸ್ಥಳಕ್ಕೆ ಬಂದು ಅಂಗಡಿ ಬಂದ್ ಮಾಡಿ ಮನೆಗೆ ತೆರಳುವಂತೆ ಸೂಚನೆಯನ್ನ ನೀಡಿದ್ದಾರೆ. ಅಲ್ಲದೇ, ಬೈಕ್ ನ ಪೋಟೋ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆಗ ಯುವಕನೊಬ್ಬ ಮನೆಗೆ ತೆರಳದೆ ಬಗ್ಗಿ ತನ್ನ ಹಿಂಭಾಗ ತೋರಿಸಿ ಈ ಪೋಟೋ ತೆಗೆದುಕೊಳ್ಳಿ ಎಂದು ಆವಾಜ್ ಹಾಕಿದ್ದಾನೆ. ಅಲ್ಲದೇ, ಸುಮ್ಮನೆ ಹೋಗದಿದ್ದರೆ ತನ್ನ ಸಂಬಂಧಿ ಕರೆಸಿ ಏನು ಮಾಡುತ್ತೇನೆ ಎಂದು ಹೆದರಿಸಿದ್ದಾನೆ. ಇದೇ ಅವಾಂತರಕ್ಕೆ ಕಾರಣವಾಗಿದೆ. ಬಳಿಕ, ಬೀಟ್ ಸಿಬ್ಬಂದಿ ಕೂಡಲೇ ಆಜಾದ್ ನಗರ ಠಾಣೆಯ ಪಿಎಸ್ ಐ ಇಮ್ರಾನ್ ಬೇಗ್ ಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಬಂದು ಅಂಗಡಿ ಮುಚ್ಚುವಂತೆ ಹೇಳಿದ್ದಾರೆ.

    Demo
    https://ainlivenews.com/wp-content/uploads/2023/11/WhatsApp-Video-2023-11-21-at-15.02.11_7e4ffa2a.mp4

    ಪಿಎಸ್ ಐ ಇಮ್ರಾನ್ ಬೇಗ್ ಬಂದು ಹೇಳಿದರು ಕೇಳದ ಸಚಿವರ ಆಪ್ತ ಅಯುಬ್ ಪೈಲ್ವಾನ್ ಸೇರಿ ಇತರರು ಪೊಲೀಸರ ಜೊತೆಯೇ ವಾಗ್ವಾದ ನಡೆಸಿದ್ದಾನೆ. ಅಂಗಡಿ ಬಂದ್ ಮಾಡುವುದಿಲ್ಲ ಏನ್ ಮಾಡ್ತಿಯಾ ಮಾಡ್ಕೋ ಹೋಗೋ, ಕೇಸ್ ಮಾಡಿಕೊಳ್ತಿಯಾ ಮಾಡಿಕೋ ಹೋಗು, ನಮ್ಮ ಮನೆಯ ಮುಂದೆ ನಿಲ್ಲಬೇಡ, ಹೇಗೆ ಡ್ಯೂಟಿ ಮಾಡ್ತಿಯಾ ಎಂದು ಪಿಎಸ್ ಐ ಇಮ್ರಾನ್ ಬೇಗ್ ಗೆ ಧಮ್ಕಿ ಹಾಕಿದ್ದಾರೆ.

    ಇದೇ ವಿಚಾರಕ್ಕೆ ಪಿಎಸ್ ಐ ಮತ್ತು ಆಯುಬ್ ಪೈಲ್ವಾನ್ ಮಧ್ಯ ಮಾತಿನ ಚಕಮಕಿ ಕೂಡ ನಡೆದಿದೆ. ಇದೀಗ ಪೊಲೀಸರು ಅಯುಬ್  ಪೈಲ್ವಾನ್ ಸೇರಿದಂತೆ ಸಾದಿಕ್ ಪೈಲ್ವಾನ್, ಹಸೇನ್ ಮತ್ತು ಹಸೇನ್ ಎಂಬ ನಾಲ್ವರ ವಿರುದ್ಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅನುಚಿತ ವರ್ತನೆ ತೋರಿರುವ ಬಗ್ಗೆ ಐಪಿಸಿ ಕಲಂ 341,504,506 ಮತ್ತು 186ರ ಅಡಿ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.


    Share. Facebook Twitter LinkedIn Email WhatsApp

    Related Posts

    ನನ್ನ ಸಂಕಷ್ಟ ಕಾಲದಲ್ಲಿ ಬಿಜೆಪಿ ನನ್ನ ನೆರವಿಗೆ ಬಂದಿಲ್ಲ -ಗಾಲಿ ಜನಾರ್ಧನ್ ರೆಡ್ಡಿ

    November 30, 2023

    ಸನ್ಮಾನದಿಂದ ಜವಾಬ್ದಾರಿ ಹೆಚ್ಚಳ- ಡಾ.ರಮೇಶ ಮಹದೇವಪ್ಪ

    November 30, 2023

    KS Eshwarappa: ಡಿಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗೋದ್ರಲ್ಲಿ ಸಂಶಯ ಇಲ್ಲ – ಕೆಎಸ್​ ಈಶ್ವರಪ್ಪ

    November 30, 2023

    ಮಂಡ್ಯ: ಸರಗಳ್ಳತನ ಮಾಡುತ್ತಿದ್ದ ಗ್ಯಾಂಗ್ ಹೆಡೆಮುರಿ ಕಟ್ಟಿದ ಮದ್ದೂರು ಪೋಲೀಸರು

    November 30, 2023

    ಅಭಿವೃದ್ಧಿ ಹೆಸರಲ್ಲಿ ಪಂಗನಾಮ ಹಾಕಿದ ಖದೀಮರು, 60 ಲಕ್ಷದ ರಸ್ತೆ ಕಾಮಗಾರಿಯನ್ನ ಗುಳುಂ

    November 30, 2023

    MB patil: ಹೆಣ್ಣು ಭ್ರೂಣ ಹತ್ಯೆ ಅಕ್ಷಮ್ಯ ಅಪರಾಧ- ಎಂ ಬಿ ಪಾಟೀಲ್​

    November 30, 2023

    Madhu Bangarappa: ಶೈಕ್ಷಣಿಕ ಕ್ರಾಂತಿಗೆ ರಾಜ್ಯ ಸರ್ಕಾರ ಸಿದ್ಧ -ಸಚಿವ ಮಧು ಬಂಗಾರಪ್ಪ

    November 30, 2023

    ನಾರಾ ಭರತ್ ರೆಡ್ಡಿ ಹಾಗೂ ನಮ್ಮ ಮಧ್ಯೆ ಬೆಂಕಿ ಹಚ್ಚೋ ಕೆಲಸ ಬೇಡ -ಸಚಿವ ಬಿ.ನಾಗೇಂದ್ರ

    November 30, 2023

    ದಾವಣಗೆರೆ- ಎಟಿಎಂಗಳ ಭದ್ರತೆ ಕುರಿತಾಗಿ ಪೊಲೀಸರ ಸಭೆ

    November 30, 2023

    ಪಂಚ ರಾಜ್ಯ ಚುನಾವಣೆಯಲ್ಲಿ ಬಹುತೇಕ ಕಡೆ ಬಿಜೆಪಿ ಅಧಿಕಾರಕ್ಕೆ ಬರಲಿದೆ-ಪ್ರಹ್ಲಾದ್ ಜೋಶಿ

    November 30, 2023

    ಕನಕದಾಸರ ಚಿಂತನೆ, ರಾಯಣ್ಣನ ಧೈರ್ಯ, ಸಿದ್ದರಾಮಯ್ಯರ ಚಾಣಕ್ಯತನ ನಮಗೆಲ್ಲ ಮಾದರಿ: ನಾರಾ ಭರತ್ ರೆಡ್ಡಿ

    November 30, 2023

    ಬಳ್ಳಾರಿಯಲ್ಲಿ ಸಂಭ್ರಮದ ಸಂತ ಶ್ರೇಷ್ಠ ಕವಿ ಭಕ್ತ ಕನಕದಾಸರ 536ನೇ ಜಯಂತಿ

    November 30, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.