ನವಲಗುಂದ : ಸಿರಸಂಗಿ ಲಿಂಗರಾಜರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡುವ ಮೂಲಕ ಸಮಾಜಕ್ಕೆ ಬೆಳಕಾದವರು ಎಂದು ಗವಿಮಠದ ಬಸವಲಿಂಗಶ್ರೀಗಳು ಹೇಳಿದರು. ಅವರು ಸಿರಸಂಗಿ ಲಿಂಗರಾಜರ 164ನೇ ಜಯಂತಿ ಆಚರಣೆಯ ದಿವ್ಯಸಾನಿಧ್ಯ ವಹಿಸಿ ನಗರದ ತಡಿಮಠದಲ್ಲಿ ಲಿಂಗರಾಜರ ಗುದ್ದುಗೆಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಅವರು ತಮ್ಮ ಬದುಕಿನಲ್ಲಿ ಎಷ್ಟೇ ತೊಂದರೆಗಳು ಎದುರಾದರೂ ಮೌಲ್ಯಗಳನ್ನು ಎತ್ತಿ ಹಿಡಿದು, ಶಿಕ್ಷಣ, ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡಿದ ಮಹಾಪುರುಷ. ಒಂದು ಕಾಲದಲ್ಲಿ ಶಿಕ್ಷಣ ಉಳ್ಳವರ ಪಾಲಾಗಿತ್ತು. ಬಡವರು ಶಿಕ್ಷಣ ಪಡೆದು ಉನ್ನತ ಜೀವನ ಪಡೆಯಬೇಕೆಂಬ ಸಂಕಲ್ಪ ಅವರದಾಗಿತ್ತು ಅಂತೆಯೇ ಇಚ್ಛಾಪತ್ರವನ್ನು ದಾನಪತ್ರವನ್ನಾಗಿ ಮಾಡಿ ಆಸ್ತಿಯನ್ನೆಲ್ಲಾ ಧಾರೆ ಎರೆದರು. ದೇಶದಲ್ಲಿ ಪ್ರಥಮ ಲಿಂಗರಾಜ ಶಿಕ್ಷಣ ಟ್ರಸ್ಟ್ ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎನಿಸಿಕೊಂಡಿತು.
ಬದುಕಿನಲ್ಲಿ ಯಾವುದನ್ನೂ ಸ್ವಹಿತಕ್ಕಾಗಿ ಆಶಿಸದೆ ಸಮಾಜದ ಏಳಿಗೆಗೆ ದುಡಿದರು. ಅವರ ಟ್ರಸ್ಟ್ನಿಂದ ಶಿಕ್ಷಣ ಪೂರೈಸಿದ ಹಲವು ಮಹನೀಯರು ಸಮಾಜದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು ಎಂದರು-ನಂತರ ತಾಲೂಕ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಶಿವಶಂಕರ ಕಲ್ಲೂರು ಮಾತನಾಡಿ ಶಿಕ್ಷಣಕ್ಕಾಗಿ ತಮ್ಮ ಸಮಸ್ತ ಸಾವಿರಾರು ಕೋಟಿ ಆಸ್ತಿಯನ್ನ, ದಾನಮಾಡಿದ ಕೀರ್ತಿ ಲಿಂಗರಾಜರಗೆ ಸಲ್ಲುತ್ತದೆ ಎಂದರು.
Ghee Tea: ತುಪ್ಪದ ಟೀ ಕುಡಿದಿದ್ದೀರಾ..? ಕುಡಿದ್ರೆ ಸಿಗುತ್ತೆ ಈ ಆರೋಗ್ಯ ಲಾಭಗಳು!
-ನಂತರ ಲಿಂಗರಾಜ ಸರದೇಸಾಯಿ ಅವರು ಮಾತನಾಡಿ ಸರ್ವಧರ್ಮದವರು ಕೂಡಿಕೊಂಡು ತ್ಯಾಗವೀರ ಸಿರಸಂಗಿ ಲಿಂಗರಾಜ 165 ನೇ ಜಯಂತಿಯನ್ನ ಅದ್ದೂರಿಯಾಗಿ ಆಚರಣೆ ಮಾಡೋಣ ಎಂದರು.“ನಂತರ ಫೀರಜಾಧೆ ಕುಟುಂಬಸ್ಥರಿಂದ ಆಸಾರ ದರ್ಗಾದಲ್ಲಿ ಲಿಂಗರಾಜ ಜಯಂತಿ ಆಚರಿಸಿದರು.”
“ನಂತರ ಲಿಂಗರಾಜ ವೃತ್ತದಲ್ಲಿರುವ ಲಿಂಗರಾಜ ಪುತ್ತಳಿಗೆ ಮಾಲಾರ್ಪಣೆ ವಿವಿಧ ಗಣ್ಯಮಾನ್ಯರ ನೇತೃತ್ವ ನೆರೆವೇರಿತು ಹಾಗೂ ಟ್ರ್ಯಾಕ್ಟರ್ ನಲ್ಲಿ ಲಿಂಗರಾಜರ ಭಾವಚಿತ್ರ ಯೊಂದಿಗೆ 25 ಜೋಡಿ ಎತ್ತಿನ ಜೊತೆಗೆ ಬ್ಯಾಂಡಬಾಜಾ ಮೆರವಣಿಗೆ ನಗರ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಲಿಂಗರಾಜವಾಡೆಗೆ ತಲುಪಿ ಜಯಂತಿ ಕಾರ್ಯಕ್ರಮ ಸಂಪನ್ನಗೊಂಡಿತು ನಂತರ ಪ್ರಸಾದವ್ಯವಸ್ಥೆ ಜರುಗಿತು.
ಹಾಸ್ಯ ಕಲಾವಿದ ಶರಣು ಯಮನೂರ ಕಾರ್ಯಕ್ರಮ ನಿರೂಪಸಿದರು. ವೇದಿಕೆಯಲ್ಲಿ ಆಶೀನರಾದ ಗಣ್ಯಮಾನ್ಯರಿಗೆ ಸನ್ಮಾನಿಸಿ ಗೌರವಿಸಿಲಾಯಿತು ” “ ನಂತರ ಪಿಎಸ್ಐ ಜನಾರ್ಧನ ಭಟ್ರಳ್ಳಿ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಪೂಜಾರ ಲಿಂಗರಾಜರ ಬಗ್ಗೆ ಮಾತನಾಡಿದರು ”
ಈ ವೇಳೆಯಲ್ಲಿ ತಾಲೂಕ ಕುಡವಕ್ಕಲಿಗ ಸಮಾಜದ ಅಧ್ಯಕ್ಷ ನಿಂಗಣ್ಣ ಹಳ್ಳದ, ಪುರಸಭೆ ಅಧ್ಯಕ್ಷ ಎಸ್.ಎಫ್. ತಡಸಿ, ಬಿಜೆಪಿ ಮುಖಂಡ ದೇವರಾಜ ದಾಡಿಭಾವಿ, ಹಿರಿಯರಾದ ರಾಯನಗೌಡ ಪಾಟೀಲ, ಬಸವರಾಜ ಸೋಮಗೊಂಡ, ಅಣ್ಣಪ್ಪ ಭಾಗಿ, ಗಂಗಾಧರ ಹಳ್ಳದ, ಗಂಗಪ್ಪ ಮನವಿ, ಶ್ರೀಶೈಲಯ್ಯ ಮೂಲಿಮನಿ, ಶಿವಶಂಕರ ಕಲ್ಲೂರು, ನಾಗನಗೌಡ ಪಾಟೀಲ, ನಿಂಗಪ್ಪ ಕೊಟಗಿ, ಬಸವರಾಜ ಅಮ್ಮಿನಭಾವಿ, ಪ್ರಕಾಶ ಶಿಗ್ಲಿ, ಬಸವರಾಜ ನಿಜಗಣ್ಣವರ, ಸಂತೋಷ ಶೆರೇವಾಡ್, ಈರಣ್ಣ ಚವಡಿ, ಶಿವಪ್ಪ ಸಂಗಟಿ, ಜೀವನ ಪವಾರ, ಮೋದಿನಸಾಬ್ ಶಿರೂರು, ಕೃಷ್ಣರಡ್ಡಿ ಕುರಟ್ಟಿ ಹಾಗೂ ನಗರ, ತಾಲೂಕಿನ ಗಣ್ಯಮಾನ್ಯರು ಉಪಸ್ಥಿತರಿದ್ದರು.