ತೆಲಂಗಾಣ:-ರಾಜ್ಯಪಾಲರು ಸಂವಿಧಾನಕ್ಕೆ ಬದ್ಧರಿರಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾ. ನಾಗರತ್ನಾ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನೋಟ್ ಬ್ಯಾನ್ ಕುರಿತು ಮತ್ತೊಮ್ಮೆ ಪ್ರಶ್ನೆ ಎತ್ತಿದ್ದಾರೆ.
ಪ್ರಧಾನಿ ಮೋದಿಯನ್ನು ಮತ್ತೊಮ್ಮೆ PM ಮಾಡಲು ಪಕ್ಷಾತೀತವಾಗಿ ಕೆಲಸ – ನಿಖಿಲ್ ಕುಮಾರಸ್ವಾಮಿ
ನವೆಂಬರ್ ೮, ೨೦೧೬ ರಲ್ಲಿ ನೋಟ್ ಬ್ಯಾನ್ ನಿರ್ಣಯ ತೆಗೆದುಕೊಂಡಾಗ, ನಿತ್ಯೋಪಯೋಗಿಗಾಗಿ ನೋಟುಗಳನ್ನು ಬದಲಾಯಿಸಿ ಕೊಳ್ಳುವ ಕಾರ್ಮಿಕರ ಸ್ಥಿತಿ ಏನಾಗಿರಬೇಕು ಇದರ ಕಲ್ಪನೆ ಮಾಡಿ ! ಅದರ ನಂತರ ಶೇಖಡ ೯೮ ರಷ್ಟು ಹಣ ಹಿಂತಿರುಗಿ ಬಂತು, ಹಾಗಾದರೆ ಕಪ್ಪು ಹಣ ಉಚ್ಚಾಟನೆ ಎಲ್ಲಿ ಆಯಿತು ? ಕಳೆದ ವರ್ಷ ಜನವರಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ೫ ನ್ಯಾಯಾಧೀಶರ ವಿಭಾಗೀಯಪೀಠದಿಂದ ನೋಟ್ ಬ್ಯಾನ್ ನ ನಿರ್ಣಯ ೪ ವಿರುದ್ಧ ೧ ಹೀಗೆ ಕಾನೂನು ರೀತಿ ಇದೆ ಎಂದು ನಿಶ್ಚಯಿಸಿದ್ದರು. ಈ ವಿಭಾಗೀಯಪೀಠದ ಸದಸ್ಯ ಆಗಿರುವ ನ್ಯಾಯಮೂರ್ತಿ ನಾಗರತ್ನ ಇವರು ನೋಟ್ ಬ್ಯಾನ್ಅನ್ನು ಸಂವಿದಾನದ ವಿರುದ್ಧವಾಗಿದೆ ಎಂದು ಹೇಳಿದ್ದರು.
ಈ ಸಮಯದಲ್ಲಿ ರಾಜ್ಯಗಳು ಮತ್ತು ರಾಜ್ಯಪಾಲರು ಇವರಲ್ಲಿನ ವಿವಾದದ ನಂತರ ಕೂಡ ನ್ಯಾಯಮೂರ್ತಿ ನಾಗರತ್ನ ಇವರು ಕಳವಳ ವ್ಯಕ್ತಪಡಿಸಿದ್ದಾರೆ. ಅವರು, ಇತ್ತೀಚೆಗೆ ಒಂದು ಪ್ರವೃತ್ತಿ ಬಂದಿದೆ ಅದು ರಾಜ್ಯಪಾಲರು ಮಸೂದೆಯನ್ನು ಅಂಗೀಕರಿಸುವಾಗ ಅಥವಾ ಅವರು ಮಾಡಿರುವ ಇತರ ಕೃತಿಗಳನ್ನು ಬಿಟ್ಟರೆ, ಇದು ಮೊಕದ್ದಮೆಯ ಅಂಶವಾಗಿದೆ. ಇದು ಒಂದು ಗಂಭೀರ ಸಾಂವಿಧಾನಿಕ ಪರಿಸ್ಥಿತಿಯಾಗಿದೆ ಮತ್ತು ರಾಜ್ಯಪಾಲರು ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸಬೇಕು ಅದರಿಂದ ಮೊಕದ್ದಮೆಗಳು ಕಡಿಮೆ ಆಗುವುದು.
ಇತ್ತೀಚಿಗೆ ಪಂಜಾಬ್, ತೆಲಂಗಾಣ, ಕೇರಳ ಮತ್ತು ತಮಿಳುನಾಡು ಇಲ್ಲಿಯ ಸರಕಾರಗಳು ರೂಪಿಸಿರುವ ಕಾನೂನನ್ನು ಇಲ್ಲಿಯ ರಾಜ್ಯಪಾಲರು ವಿರೋಧಿಸಿದ್ದಾರೆ. ಇಂತಹದರಲ್ಲಿ ಕೇರಳ ಮತ್ತು ತಮಿಳುನಾಡಿನ ರಾಜ್ಯ ಸರಕಾರದಿಂದ ರಾಜ್ಯಪಾಲರ ಮೇಲೆ ವಿಧೇಯಕ ತಡೆಯುವುದು ಮತ್ತು ವಿಳಂಬನೀತಿಯ ಆರೋಪ ಮಾಡಲಾಗಿದೆ. ಇದರ ಬಗ್ಗೆ ನ್ಯಾಯಮೂರ್ತಿ ಇವರು, ರಾಜ್ಯಪಾಲರು ‘ಏನು ಮಾಡಬೇಕು ?’ ಮತ್ತು ‘ಏನು ಮಾಡಬಾರದು?’ ಇದು ಹೇಳುವುದು ಯೋಗ್ಯವಲ್ಲ ಎಂದು ಹೇಳಿದರು. ನನಗೆ ಅನಿಸುತ್ತದೆ, ಎಲ್ಲಿ ಅವರು ಸಂವಿಧಾನದ ಪ್ರಕಾರ ಕರ್ತವ್ಯ ನಿರ್ವಹಿಸಬೇಕೆಂದು ಹೇಳಬೇಕಾಗುವ ಸಮಯ ಬಂದಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ