ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಸರ್ಕಾರ ಗಮನ ಹರಿಸಿ ಕಠಿಣ ಕ್ರಮವನ್ನು ಜಾರಿಗೊಳಿಸಿದೆ.
ಇನ್ಮುಂದೆ ಕೋವಿಡ್ ಅಂತ ಯಾರೇ ಬಂದರೂ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ವೈದ್ಯರಿಗೆ ಶಿಕ್ಷೆ ಕೊಡುವುದು ಹಾಗೆ ಕೊರೋನಾ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸಿರೋ ಸರ್ಕಾರ ರೋಗಿಗಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಯಾವ ಸಂದರ್ಭದಲ್ಲಾದ್ರೂ ಚಿಕಿತ್ಸೆ ಗೆ ಸಿದ್ಧವಿರಿ ಎಂದು ಸೂಚನೆ ನೀಡಿದೆ.
Breaking News: ಅಂದ್ರಹಳ್ಳಿಯಲ್ಲಿ ಶಾಲಾ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಕೇಸ್: ಮುಖ್ಯ ಶಿಕ್ಷಕಿ ಅರೆಸ್ಟ್!
ಚಾಮರಾಜನಗರ ಪ್ರಕರಣದಿಂದ ಎಚ್ಚೆತ್ತುಕೊಳ್ಳಲು ವೈದ್ಯರಿಗೆ ಖಡಕ್ ಸೂಚನೆ ನೀಡಿದ್ದು ಯಾವುದೇ ರೋಗಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗಬೇಕು ಒಂದು ವೇಳೆ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯವಹಿಸಿದ್ರೆ ಆ ಸಿಬ್ಬಂದಿ ಅಥವಾ ವೈದ್ಯರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ವೈದ್ಯರಿಗೆ ಎಚ್ಚರಿಕೆ ನೀಡಿರೋ ಸರ್ಕಾರ
ವೈದ್ಯರು ಸರಿಯಾಗಿ ಕೆಲಸ ನಿರ್ವಹಣೆ ಮಾಡದೆ ಹೋದರೆ ಅವರ ನಿರ್ಲಕ್ಷ್ಯಕ್ಕೆ ಅವರೇ ಹೊಣೆ ತಪ್ಪು ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಸೂಚನೆ ಈ ಹಿನ್ನೆಲೆ ತಪ್ಪು ಮರುಕಳಿಸದಂತೆ ಕೆಲಸ ನಿರ್ವಹಿಸಲು ವೈದ್ಯರು ಹಾಗೂ ಸಿಬ್ಬಂದಿಗೆ ಖಡಕ್ ಎಚ್ಚರಿಕೆ