ಬಜೆಟ್ಗೂ ಮೊದಲೇ ಮದ್ಯದ ದರ ಏರಿಕೆ ಮಾಡುವ ಮೂಲಕ ಮದ್ಯಪ್ರಿಯರಿಗೆ ಸರ್ಕಾರ ಬಿಗ್ ಶಾಕ್. ನೀಡಿದೆ. 10 ರೂಪಾಯಿಯಿಂದ 45 ರೂಪಾಯಿ ವರೆಗೂ ಬೆಲೆ ಏರಿಕೆಯಾಗಿದ್ದು ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ.
ಕಳೆದ 6 ತಿಂಗಳ ಹಿಂದೆ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಸುಂಕವನ್ನು ಸರ್ಕಾರ ಹೆಚ್ಚಳ ಮಾಡಿದೆ. ದುಬಾರಿ ಬೆಲೆಯ ಬಿಯರ್ ದರ ಏರಿಕೆಯಾಗಿಲ್ಲ. ಬದಲಾಗಿ 300 ರೂ. ಒಳಗಡೆ ಇರುವ ಮದ್ಯದ ದರವನ್ನು ಅಬಕಾರಿ ಇಲಾಖೆ ಏರಿಕೆ ಮಾಡಿದೆ.
ರಾಜ್ಯ ಸರಕಾರ 2024-25ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 38,525 ಕೋಟಿ ರೂ. ಆದಾಯದ ಗುರಿ ನೀಡಿದೆ. ಪೈಕಿ ಸದ್ಯ 15 ಸಾವಿರ ಕೋಟಿ ರೂ. ಆದಾಯ ಸಂಗ್ರಹ ಕಡಿಮೆಯಾಗಿದೆ ಎನ್ನಲಾಗಿದೆ. ಹೀಗಾಗಿ ಟಾರ್ಗೆಟ್ ರೀಚ್ ಗೆ ಈ ಅಬಕಾರಿ ಇಲಾಖೆ ಸರ್ಕಸ್ ಮುಂದುವರೆಸಿದ್ದು ಬಿಯರ್ ದರ ಏರಿಕೆ ಮಾಡಿದೆ.