ಕಟಕ್:- ಒಡಿಶಾದ ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳಿಬ್ಬರಿಗೆ ಅಲ್ಲಿನ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ನಡೆದಿದೆ. ಆದರೆ, ವಿಷಯ ತಿಳಿದ ತಕ್ಷಣವೇ ಜೂನಿಯರ್ ವೈದ್ಯರುಗಳು ಆತನಿಗೆ ಥಳಿಸಿದ್ದು, ಗಂಭೀರವಾಗಿ ಗಾಯಗೊಂಡ ಆತ ಐಸಿಯು ಸೇರಿದ್ದಾನೆ.
ವೈದ್ಯಕೀಯ ಕಾಲೇಜಿನ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯ ತಾಯಿ ಮತ್ತು ಚಿಕ್ಕಮ್ಮ ಶುಕ್ರವಾರ ತಪಾಸಣೆಗಾಗಿ ಹೃದ್ರೋಗ ವಿಭಾಗಕ್ಕೆ ಹೋಗಿದ್ದಾಗ ಆರೋಪಿ ವೈದ್ಯ ಕೃತ್ಯ ಎಸಗಿದ್ದಾನೆ. ಇಬ್ಬರು ಮಹಿಳೆಯರಿಗೆ ಎಕೋಕಾರ್ಡಿಯೋಗ್ರಾಮ್ಗೆ ಸಲಹೆ ನೀಡಲಾಗಿತ್ತು ಕಾರ್ಡಿಯಾಲಜಿ ಎಂಡಿ ವಿದ್ಯಾರ್ಥಿಯಾಗಿರುವ ಪುರುಷ ವೈದ್ಯ ಇಸಿಜಿ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. .
ವಿಷಯ ತಿಳಿದ ಕಿರಿಯ ವೈದ್ಯರ ಸಂಘದ ಸದಸ್ಯರು ಆರೋಪಿ ವೈದ್ಯನಿಗೆ ಚೆನ್ನಾತಿ ಥಳಿಸಿದ್ದಾರೆ. ಅವರಿಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಅದೇ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯರು ಆರಂಭದಲ್ಲಿ ಪ್ರಕರಣ ದಾಖಲಿಸಲು ಹಿಂಜರಿದಿದ್ದರು. ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರು ಮಧ್ಯಪ್ರವೇಶಿಸಿ ಹಾಗೆ ಮಾಡಲು ಮನವೊಲಿಸಿದ ನಂತರ ಅವರು ಎಫ್ಐಆರ್ ದಾಖಲಿಸಿದ್ದಾರೆ.
ಮಂಗಳಬಾಗ್ ಪೊಲೀಸ್ ಠಾಣೆಗೆ ಸೋಮವಾರ ಇಬ್ಬರು ರೋಗಿಗಳಿಂದ ಲಿಖಿತ ದೂರು ನೀಡಿದ್ದರು. ಅದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ” ಎಂದು ಕಟಕ್ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ತಿಳಿಸಿದ್ದಾರೆ.