ಬಂಗಾರಪೇಟೆ – ಬಂಗಾರಪೇಟೆ ಕ್ಷೇತ್ರವನ್ನು ಅಭಿವೃದ್ಧಿಯ ಮತ್ತೊಂದು ಮಜಲಿಗೆ ಕೊಂಡೊಯ್ಯುವುದು ನನ್ನ ಗುರಿಯಾಗಿದೆ ಎಂದು ಕೆ ಯು ಡಿ ಐ ಎಫ್ ಸಿ ಅಧ್ಯಕ್ಷರು ಹಾಗೂ ಬಂಗಾರಪೇಟೆ ಶಾಸಕರಾದ ಎಸ್ ಎನ್ ನಾರಾಯಣ ಸ್ವಾಮಿ ಅವರು ತಿಳಿಸಿದರು. ಇಂದು ಬಂಗಾರಪೇಟೆ ನಗರದ ಪುರಸಭಾ ವ್ಯಾಪ್ತಿಯ ಸುಮಾರು 60 ಕೋಟಿಗೂ ಅಧಿಕ ಮೊತ್ತದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭ ವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪುರುಷರ ಫಲವತ್ತತೆ ಹೆಚ್ಚಿಸೋಕು ಸೈ! ದೇಹದ ತೂಕ ಇಳಿಸೋಕು ಸೈ ಈ ಸಿಹಿ ಕುಂಬಳಕಾಯಿ
ಈ ಸರ್ಕಾರ ಬಂದ ನಂತರ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳಂತೆ ಪಂಚ ಗ್ಯಾರೆಂಟಿ ಗಳನ್ನು ಅನುಷ್ಠಾನ ಗೊಳಿಸಲಾಗಿದೆ. ತಾಲ್ಲೂಕಿನ ಜನರು ಅವುಗಳ ಲಾಭ ಪಡೆಯುತ್ತಿದ್ದಾರೆ. ಇಂದು ಆ ಗ್ಯಾರಂಟಿ ಯೋಜನೆಗಳ ಜೊತೆಗೆ ಬಹಳ ವರ್ಷಗಳ ನಿರೀಕ್ಷೆಯಲ್ಲಿದ್ದ ಕನ್ನಡ ಭವನ, ಪತ್ರಕರ್ತರ ಭವನ, ರಂಗಮಂದಿರ,
ಬಿ. ಈ. ಓ. ಕಚೇರಿ, ಸರ್ಕಾರಿ ನೌಕರರ ಸಂಘದ ಕಚೇರಿ, ಶಿಕ್ಷಕರ ಭವನ, ನೂತನ ಬಸ್ ನಿಲ್ದಾಣ, ನಗರಾದ್ಯಂತ ಸಿಮೆಂಟ್ ರಸ್ತೆಗಳು, ಸಮುದಾಯ ಭವನ, ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ 4ಕೋಟಿ ವೆಚ್ಚದಲ್ಲಿ ಸಿಮೆಂಟ್ ರಸ್ತೆಗಳು, ಅಗತ್ಯವಿರುವೆಡೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು, 7.5ಕೋಟಿ ವೆಚ್ಚದಲ್ಲಿ ಮುಖ್ಯ ರಸ್ತೆಗಳ ಸುಂದರಿಕರಣ, ನಗರದ ವಿವಿಧ ಬಡಾವಣೆಗಳಲ್ಲಿ ಚರಂಡಿ ವ್ಯವಸ್ಥೆ ಸೇರಿ ಹಲವಾರು ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದೆ ಎಂದರು.