ಅಮೆರಿಕ ಮೂಲದ ಬೃಹತ್ ಟೆಕ್ ಕಂಪನಿ ಆಪಲ್ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿದ್ದು, ಬೆಂಗಳೂರಿನ ಮಿನ್ಸ್ಕ್ ಸ್ಕ್ವೇರ್ನಲ್ಲಿ ಹೊಸ ಕಛೇರಿ ಆರಂಭಿಸಿದೆ.
ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಗುರುಗ್ರಾಮ್ನಲ್ಲಿ ಕಾರ್ಪೊರೇಟ್ ಕಛೇರಿಗಳನ್ನು ಹೊಂದಿದ್ದು, ಬೆಂಗಳೂರಿನಲ್ಲಿ ಇದೀಗ ಎರಡನೇ ಕಛೇರಿ ಆರಂಭಿಸಿದೆ. ಬೆಂಗಳೂರಿನಲ್ಲಿ ಆಪಲ್ ಆರಂಭಿಸಿರುವ ಹೊಸ ಕಛೇರಿಯು 15 ಮಹಡಿಗಳನ್ನು ಹೊಂದಿದ್ದು, ಲ್ಯಾಬ್ ಸ್ಥಳ ಹಾಗೂ 1,200 ಉದ್ಯೋಗಿಗಳಿಗೆ ಬೇಕಾದಷ್ಟು ವಿಸ್ತಾರವಾದ ಸ್ಥಳಾವಕಾಶವನ್ನು ಹೊಂದಿದೆ.
ಈ ಡೈನಾಮಿಕ್ ನಗರವು ಈಗಾಗಲೇ ಸಾಫ್ಟ್ವೇರ್ ಎಂಜಿನಿಯರಿಂಗ್ ಮತ್ತು ಹಾರ್ಡ್ವೇರ್ ತಂತ್ರಜ್ಞಾನ, ಕಾರ್ಯಾಚರಣೆ, ಗ್ರಾಹಕ ಬೆಂಬಲ ಮತ್ತು ಇನ್ನೂ ಹೆಚ್ಚಿನ ಪ್ರತಿಭಾವಂತ ತಂಡಗಳಿಗೆ ನೆಲೆಯಾಗಿದೆ. ಈ ಹೊಸ ಕಛೇರಿಯನ್ನು ನಾವೀನ್ಯತೆ, ಸೃಜನಶೀಲತೆ ಮತ್ತು ಸಂಪರ್ಕವನ್ನು ಉತ್ತೇಜಿಸಲು ರಚಿಸಲಾಗಿದೆ.
ಟೆಕ್ ದೈತ್ಯ ಕಂಪನಿಯು ಭಾರತದಲ್ಲಿ ಈಗಾಗಲೇ ಸುಮಾರು 3,000 ಉದ್ಯೋಗಿಗಳನ್ನು ಹೊಂದಿದೆ. ಇದಲ್ಲದೆ ಕಂಪನಿ ಭಾರತೀಯ ಪೂರೈಕೆದಾರರನ್ನೂ ಹೊಂದಿದ್ದು, ದೇಶವ್ಯಾಪಿ ಸಾವಿರಾರು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.
ಆಪಲ್ 2020ರಿಂದ ತನ್ನ ಕಾರ್ಪೊರೇಟ್ ಕಾರ್ಯಾಚರಣೆಗಳಲ್ಲಿ ಶೂನ್ಯ ಇಂಗಾಲ ನೀತಿಗೆ ಒತ್ತು ನೀಡುತ್ತಿದ್ದು, 2018ರಿಂದ ಶೇ. 100ರಷ್ಟು ನವೀಕರಿಸಬಹುದಾದ ಇಂಧನವನ್ನು ಮಾತ್ರ ಬಳಸಿಕೊಂಡು ತನ್ನ ಎಲ್ಲಾ ಆಪಲ್ ಸೌಲಭ್ಯಗಳನ್ನು ಕಾರ್ಯಚರಿಸುತ್ತಿದೆ.