ಶಿವಮೊಗ್ಗ : ಕಣ್ಣಿಗೆ ಖಾರದ ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ಶರಾವತಿ ನಗರದ ಪಾಂಡುರಂಗ ದೇವಸ್ಥಾನದ ಬಳಿ ಘಟನೆ ನಡೆದಿದೆ. ಸ್ನೇಹಿತನಿಂದಲೇ ಯುವಕನ ಮೇಲೆ ಹಲ್ಲೆ ನಡೆದಿದೆ. ರವಿ ಎಂಬ ಯುವಕನಿಗೆ ಮನಸೋಇಚ್ಛೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ. ಯುವಕ ರವಿ ಸಿಟಿ ಬಸ್ ಡ್ರೈವರ್ ಆಗಿದ್ದು, ಸ್ನೇಹಿತ ಅರುಣ್ ಹಲ್ಲೆ ಮಾಡಿದ ಬಳಿಕ ಪರಾರಿಯಾಗಿದ್ದಾನೆ.
ಬಿಜೆಪಿಯಲ್ಲಿನ ಭಿನ್ನಮತ ; ಪಕ್ಷದಲ್ಲಿನ ಗುಂಪುಗಾರಿಕೆ ಬೇಸರ ತಂದಿದೆ ; ಆರ್.ಆಶೋಕ್
ಅರುಣ್ ಮತ್ತು ರವಿ ಇಬ್ಬರು ಸ್ನೇಹಿತರಾಗಿದ್ದು, ಅರುಣ್ ರವಿ ಹೆಂಡತಿಗೆ ಫೋನ್ , ಮೆಸೇಜ್ ಮಾಡಿ ಟಾರ್ಚರ್ ಮಾಡುತ್ತಿದ್ದ. ಹೆಂಡತಿಗೆ ಯಾಕೇ ಮೆಸೇಜ್ ಮಾಡುತ್ತೀಯಾ ಎಂದು ಕೇಳಲು ಹೋದ ಸ್ನೇಹಿತ ರವಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇನ್ನೂ ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಠಾಣಾ ಪೊಲೀಸರು , ಅರುಣ್ ಪತ್ತೆಗೆ ಬಲೆ ಬೀಸಿದ್ದಾರೆ.