ಬೆಂಗಳೂರು:- ಕುಡಿಯುವ ನೀರಿನ ಮೇಲೂ ಆಹಾರ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಕಲಬೆರಕೆ ಉತ್ಪನ್ನ, ಕಳಪೆ ಗುಣಮಟ್ಟದ ಸಾಮಗ್ರಿ, ಕಳಪೆ ಆಹಾರ, ಕಳಪೆ ಔಷಧ, ಕಳಪೆ ಕಾಸ್ಮೆಟಿಕ್ಸ್ ಹೆಚ್ಚಾಗಿವೆ. ಇವುಗಳು ಮನುಷ್ಯರ ಆರೋಗ್ಯದ ಮೇಲೆ ಬಹಳ ದುಷ್ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆಯಲ್ಲಿ ಇದೀಗ ಆರೋಗ್ಯ ಇಲಾಖೆ ಉತ್ತಮ ಕಾರ್ಯಕ್ಕೆ ಮುಂದಾಗಿದೆ.
ವಾರದಲ್ಲಿ 288 ವಾಟರ್ ಬಾಟಲ್ ಸ್ಯಾಂಪಲ್ ಪರೀಕ್ಷೆಯ ವರದಿ ಹೊರ ಬರಲಿದೆ. ಮಿನಿರಲ್ ವಾಟರ್ ಎಂದು ಬ್ರಾಂಡ್ ಹೆಸರಗಳುನ್ನು ಬಳಿಸಿಕೊಂಡು ಜನರಲ್ಲಿ ಗೊಂದಲ ಸೃಷ್ಟಿಸಿ ಟೋಪಿ ಹಾಕುವ ವಾಟರ್ ಬಾಟಲ್ಗಳ ಬಂಡಾವಳ ಹೊರ ಬೀಳಲಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಕಡೆಗಳಿಂದ ಆಹಾರ ಇಲಾಖೆ 288 ವಾಟರ್ ಬಾಟಲ್ಗಳ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ಪ್ಲಾಸ್ಟಿಕ್ ವಾಟರ್ ಬಾಟಲ್ ಕುಡಿಯುವ ನೀರು ಸುರಕ್ಷಿತವಾ ಎಂಬ ವರದಿ ಆಹಾರ ಇಲಾಖೆಯ ಕೈ ಸೇರಲಿದೆ. ಈ ವಾರದಲ್ಲಿ ವರದಿ ದೊರೆಯುವ ನಿರೀಕ್ಷೆಇದೆ.
ಇತ್ತೀಚಿನ ದಿನಗಳಲ್ಲಿ ಕುಡಿಯುವ ನೀರಿನ ಬಗ್ಗೆ ನಿಗಾವಹಿಸುವಂತೆ ಆಹಾರ ತಜ್ಞರು ಸಲಹೆ ನೀಡಿದ್ದಾರೆ. ಕಳಪೆ ನೀರಿನಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ.