ಬಿಗ್ ಬಾಸ್ ಮನೆ ಇದೀಗ 77 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಇದೀಗ ಎಂದಿನಂತೆ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಸುದೀಪ್ (Sudeep) ಅನುಪಸ್ಥಿತಿಯಲ್ಲಿ ಡಬಲ್ ಎಲಿಮಿನೇಷನ್ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ಅಸ್ಥಿಕ್ ಅವಿನಾಶ್ ಶೆಟ್ಟಿ (Avinash Shetty) ಎಲಿಮಿನೇಟ್ ಆಗಿದ್ದಾರೆ.
ದೊಡ್ಮನೆ ಆಟ 50 ದಿನ ಪೂರೈಸಿದ ಸಂದರ್ಭದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮಂಗಳೂರಿನ ಅವಿನಾಶ್ ಶೆಟ್ಟಿ ಎಂಟ್ರಿ ಕೊಟ್ಟಿದ್ದರು. ಮನೆಗೆ ಎಂಟ್ರಿ ಕೊಟ್ಟಾಗಲೇ ಆನೆ ವಿನಯ್ಗೆ ಮಾವುತನಾಗಿ ಪಳಗಿಸುತ್ತೇನೆ ಎಂದು ಅವಿನಾಶ್ ಡೈಲಾಗ್ ಹೊಡೆದಿದ್ದರು. ಇದೀಗ ಆನೆ ವಿನಯ್ನ ಪಳಗಿಸೋದ್ರಲ್ಲಿ ಮತ್ತು ಬಿಗ್ ಬಾಸ್ ಮನೆ ಆಟ ಆಡೋದ್ರಲ್ಲಿ ಅವಿನಾಶ್ ಸೋತಿದ್ದಾರೆ.
iPhone 16 ಲೈನ್ಅಪ್ ಬಗ್ಗೆ ನಿಮಗೇನು ಗೊತ್ತು?: A18 ಚಿಪ್ ಯಾಕೆ ಹಾಕ್ತಾರೆ ಗೊತ್ತಾ?
ಕಳೆದ ವಾರ ವೈಲ್ಡ್ ಕಾರ್ಡ್ ಎಂಟ್ರಿ ಪವಿ ಪೂವಪ್ಪ ಎಲಿಮಿನೇಟ್ ಆಗಿದ್ದರು. ಇದೀಗ ಈ ವಾರ ಅವಿನಾಶ್ಗೆ ದೊಡ್ಮನೆ ಆಟ ಅಂತ್ಯವಾಗಿದೆ. ಡಬಲ್ ಎಲಿಮಿನೇಷನ್ನ (Elimination) ಮೊದಲ ಸ್ಪರ್ಧಿ ಅವಿನಾಶ್ ಎಂದು ತಿಳಿದು ಬಂದಿದ್ದು, ಮತ್ತೊಬ್ಬ ಸ್ಪರ್ಧಿ ಯಾರು ರಿವೀಲ್ ಆಗಿಲ್ಲ.
ಬಿಗ್ ಬಾಸ್ ಮನೆ ಆಟ 23 ದಿನಗಳು ಬಾಕಿಯಿರುವಾಗಲೇ ಅವಿನಾಶ್ ಎಲಿಮಿನೇಟ್ ಆಗಿರೋದು ಫ್ಯಾನ್ಸ್ಗೆ ಶಾಕ್ ಕೊಟ್ಟಿದೆ. ಕಳೆದ ವಾರ ಅವಿನಾಶ್ ಶೆಟ್ಟಿ ಆಟ ಚೆನ್ನಾಗಿತ್ತು. ಹಾಗಾಗಿ ಅಭಿಮಾನಿಗಳಿಗೆ ಅವರ ಎಲಿಮಿನೇಷನ್ ಬಗ್ಗೆ ಅನುಮಾನವಿತ್ತು. ಇದೀಗ ಉತ್ತರ ಸಿಕ್ಕಿದೆ. ಹಾಗಾದ್ರೆ ಎಲಿಮಿನೇಟ್ ಆಗುವ ಮತ್ತೊಬ್ಬ ಸ್ಪರ್ಧಿ ಯಾರು? ಕಾಯಬೇಕಿದೆ.