ಗದಗ : ರಾಜ್ಯದಲ್ಲಿ ಒಂದು ಕಡೆ ಮೈಕ್ರೋ ಫೈನಾನ್ಸ್ ಗಳ ಕಿರಕುಳ ಜನರ ಜೀವನವನ್ನು ಮೂರಾಬಟ್ಟೆ ಮಾಡಿದೆ. ಇನ್ನೊಂದೆಡೆ ಮೀಟರ್ ಬಡ್ಡಿ ದಂಧೆಕೊರರ ಚಿತ್ರ ಹಿಂಸೆಗೆ ಇಡೀ ಕುಟುಂಬವೇ ನಲುಗಿದೆ. ದಶರಥ ಬಳ್ಳಾರಿ ಎಂಬುವನಿಗೆ ಬಡ್ಡಿ ಹಣ ದಂಧೆಕೋರರು ಚಿತ್ರಹಿಂಸೆ ನೀಡಿದ್ದಾರೆ. ಗದಗ ಜಿಲ್ಲೆಯ ಬೆಟಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಂಜುನಾಥ ಹಂಸನೂರ, ಮಹೇಶ್ ಹಂಸನೂರ, ಡಿಸ್ಕವರಿ ಮಂಜು, ಹನುಮಂತ ಎಂಬುವರ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ದಶರಥನನ್ನು ಮನೆಯಲ್ಲಿ ಕೂಡಿ ಹಾಕಿ ಕುಡಿದು ಇಡೀ ರಾತ್ರಿ ಹೊಡೆದು ಚಿತ್ರಹಿಂಸೆ ನೀಡಿದ್ದಾರೆ. ಬೆಲ್ಟ್, ಕೇಬಲ್ ವೈರ್, ಲಾಠಿಯಿಂದ ಬಾಸುಂಡೆ ಬರುವಂತೆ ಹಲ್ಲೆ ನಡೆಸಿದ್ದಾರೆ. ಎರಡು ವರ್ಷದ ಹಿಂದೆ ಮಂಜುನಾಥ ಹಂಸನೂರ ಬಳಿ ದಶರಥ 1 ಲಕ್ಷ ರೂ ಸಾಲ ಪಡೆದಿದ್ದು, ಬಡ್ಡಿ ಹಣ ಸರಿಯಾಗಿ ನೀಡದ್ದಕ್ಕೆ ಎತ್ತಾಕಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ನಾಲ್ವರು ಆರೋಪಿಗಳ ವಿರುದ್ಧ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.