ಶಿವಮೊಗ್ಗ: ನಗರದ ಕಾಶಿಪುರದ ಎರಡನೇ ತಿರುವಿನಲ್ಲಿರುವ ಕಾಶಿಪುರದ ನಿವಾಸಿ ರವಿಕುಮಾರ್ ಹನುಮಂತಪ್ಪ ಮನೆ ಮುಂದೆ ವಾಮಾಚಾರ ನಡೆದಿದೆ ಎನ್ನಲಾದ ಲಿಂಬೆಹಣ್ಣು ಮತ್ತು ಬೆಲ್ಲವಿದ್ದ ಪೊಟ್ಟಣ ಚಲಿಸಿದ್ದನ್ನು ನೋಡಿ ಮನೆಯ ಕುಟುಂಬಸ್ಥರು ಭಯಭೀತರಾದ ಘಟನೆ ನಡೆದಿದೆ.
Gruhalakshmi Yojane: ಇನ್ಮುಂದೆ ಪ್ರತೀ ತಿಂಗಳು ಗೃಹಲಕ್ಷ್ಮಿ ಹಣ ಬರೋ ಡೇಟ್ ಯಾವುದು ಗೊತ್ತಾ!?
ನಿಂಬೆಹಣ್ಣು ಹಾಗೂ ಬೆಲ್ಲದ ಪೊಟ್ಟಣವನ್ನು ಟಿವಿಎಸ್ ಬೈಕ್ನಲ್ಲಿ ಬಂದ ಪುರುಷ ಹಾಗೂ ಮಹಿಳೆ ಎಸೆದು ಹೋಗಿದ್ದಾರಂತೆ.
ರವಿ ಕುಮಾರ್ ಪುತ್ರಿ ತುಳಸಿ ಪೂಜೆ ಮಾಡುವ ವೇಳೆ ವಾಮಾಚಾರ ಮಾಡಿದ ಬೆಲ್ಲ ಹಾಗೂ ನಿಂಬೆಹಣ್ಣು ಇದ್ದ ಪೊಟ್ಟಣ ಚಲಿಸಿದೆ. ವಾಮಾಚಾರದ ಪೊಟ್ಟಣ ಚಲಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೃಶ್ಯ ಗಮನಿಸುತ್ತಿದ್ದಂತೆ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ ಕುಟುಂಬಸ್ಥರು, ವಾಮಾಚಾರ ಮಾಡಿವವರನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ.