ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿರುವ 421.32 ಎಕರೆ ಸ್ಟಡ್ ಫಾರ್ಮ್ನಲ್ಲಿ ಟೌನ್ಶಿಪ್ ನಿರ್ಮಾಣಕ್ಕೆ ಸಂಚು ರೂಪಿಸಲಾಗಿದೆ. ಬಂಡವಾಳ ಶಾಹಿಗಳ ಮೆಗಾ ಪ್ಲ್ಯಾನ್ಗೆ ಸರಕಾರದ ಮಟ್ಟದಲ್ಲೂ ಭಾರಿ ಲಾಬಿ ನಡೆದಿದೆ.
ಪಶುಸಂಗೋಪನಾ ಇಲಾಖೆ ಸುಪರ್ದಿಯಲ್ಲಿರುವ ಸ್ಟಡ್ ಫಾರ್ಮ್ ಮೇಲೆ ನಗರಾಭಿವೃದ್ಧಿ ಇಲಾಖೆ ಕಣ್ಣು ನೆಟ್ಟಿದೆ. ಈಗಾಗಲೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಪಶುಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್ ಹಾಗೂ ಎರಡೂ ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ.
ಕುಣಿಗಲ್ ಅಸ್ಮಿತೆಯ ಉಳಿವಿಗಾಗಿ ಎಚ್ಚರಿಕೆ ಕರೆ ರವಾನಿಸಲು ಸ್ಥಳೀಯರು ನಿರ್ಧರಿಸಿದ್ದು, ರಸ್ತೆಗಳಿದು ಪ್ರತಿಭಟಿಸಿದ ಹೋರಾಟಗಾರರು.. ಸ್ಟಡ್ ಫಾಮ್೯ ಪಶುಸಂಗೋಪನೆ ಇಲಾಖೆಯಲ್ಲೇ ಉಳಿಸುವಂತೆ ಮನವಿ ಮಾಡಲಾಗಿದೆ. ಇನ್ನೂ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ರಾಜೇಶ್ ಗೌಡ, ಜೆಡಿಎಸ್ ಜಗದೀಶ್, ಮುಖ್ಯಮಂತ್ರಿ ಚಂದ್ರು,ಸಾಮಾಜಿಕ ಹೋರಾಟಗಾರ ಚೇತನ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.