ಬೆಂಗಳೂರು:-ಪರಪ್ಪನ ಅಗ್ರಹಾರದಲ್ಲಿದ್ದಾಗ ನಟ ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ಅವರಿಗೆ ಧ್ಯಾನ ಮಾಡುವುದನ್ನು ಹೇಳಿಕೊಟ್ಟಿದ್ದೇನೆ ಎಂದಿದ್ದ ಸಿದ್ದಾರೂಢಗೆ ಕಂಟಕ ಎದುರಾಗಿದೆ.
Sukshetra Mylaresha: “ಸಂಪಾಯಿತಲೆ ಪರಾಕ್”: ಸತ್ಯವಾಯಿತು ಸುಕ್ಷೇತ್ರ ಮೈಲಾರೇಶನ ಭವಿಷ್ಯವಾಣಿ..!
ಸಿದ್ಧಾರೂಢ ಹೇಳಿಕೆ ಜೈಲು ಅಧಿಕಾರಿಗಳಿಗೆ ಸಂಕಷ್ಟ ತಂದಿತ್ತು, ದರ್ಶನ್ರನ್ನು ಯಾರಿಗೂ ಭೇಟಿಯಾಗಲು ಅವಕಾಶ ಇಲ್ಲದಿದ್ದರೂ ಈತ ಭೇಟಿ ಮಾಡಿದ್ದು ಹೇಗೆ ಎಂದು ಉನ್ನತ ಅಧಿಕಾರಿಗಳು ಜೈಲು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದರು. ಸಿದ್ಧಾರೂಢ ಹೇಳಿಕೆ ಕಾರಾಗೃಹ ಅಧಿಕಾರಿಗಳಿಗೆ ಸಂಕಷ್ಟ ತಂದ ಹಿನ್ನಲೆಯಲ್ಲಿ ಕಾನೂನು ಮುಖಾಂತರವೇ ಕ್ರಮಕ್ಕೆ ಮುಂದಾಗಿದ್ದಾರೆ.
ಸನ್ನಡತೆಯನ್ನು ಕ್ಯಾನ್ಸಲ್ ಮಾಡಲು ಜೈಲು ಅಧಿಕಾರಿಗಳು ತೀರ್ಮಾನ ಮಾಡಿದ್ದು, ಮತ್ತೆ ಜೈಲು ತೋರಿಸಲು ಸಜ್ಜಾಗಿದ್ದಾರೆ. ಕಾರಾಗೃಹದ ಊಟವನ್ನು ನಾಯಿ ಕೂಡ ತಿನ್ನಲ್ಲ ಎಂದಿದ್ದಲ್ಲದೆ ಅಲ್ಲಿನ ವ್ಯವಸ್ಥೆ ಬಗ್ಗೆಯೇ ಅವಹೇಳನ ಮಾಡಿದ್ದು, ದರ್ಶನ್ ಭೇಟಿಯಾಗದೇ ಇದ್ದರೂ ತನ್ನ ಪ್ರಚಾರಕ್ಕೆ ಭೇಟಿಯಾಗಿದ್ದೆ ಎಂದು ಸುಳ್ಳು ಹೇಳಿಕೊಂಡಿದ್ದವನಿಗೆ ಪೊಲೀಸರು ಬಿಸಿ ಮುಟ್ಟಿಸಲಿದ್ದಾರೆ. ಗೃಹ ಇಲಾಖೆ ಕಾರಾಗೃಹ ಇಲಾಖೆಯಿಂದ ವರದಿ ಕೇಳಿದ್ದು, ಶೀಘ್ರದಲ್ಲೇ ಸಿದ್ಧಾರೂಢನನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.