ಬೆಂಗಳೂರು: ಆತ ಸ್ನೇಹಿತನ ಜೊತೆ ಎಣ್ಣೆ ಹಾಕಲು ಬಾರ್ಗೆ ಹೋಗಿದ್ದ. ಅದೇ ಬಾರ್ಗೆ ಸ್ನೇಹಿತನಿಗೆ ಹಣ ನೀಡಬೇಕಾದವ್ರು ಸಹ ಬಂದಿದ್ರು. ಈ ವೇಳೆ ಸ್ನೇಹಿತನ ಹಣ ಕೊಡಿಸಲು ಹೋದವನು ಹೆಣವಾಗಿ ಹೋಗಿದ್ದಾನೆ. ಎಣ್ಣೆ ಮತ್ತಲ್ಲಿ ಹಣದ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಅಷ್ಟಕ್ಕೂ ಈ ಜಗಳ ನಡೆದಿದ್ದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.. ಹೌದು ಸ್ನೇಹಿತನಿಗೆ ಬರಬೇಕಾದ ಹಣವನ್ನು ಕೊಡಿಸಲು ಮಧ್ಯಸ್ಥಿಕೆ ಮಾಡಲು ಹೋದವನು ಕೊಲೆಯಾಗಿ ಹೋಗಿರುವಂತಹ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗಸಂದ್ರದಲ್ಲಿ ನಡೆದಿದೆ …
ಹೀಗೆ ಫೋಟೋದಲ್ಲಿ ಕಾಣ್ತಿದ್ದಾರಲ್ಲ ಗೋಪಾಲ ಅಂತ ಬಾರ್ ನಲ್ಲಿ ಎಣ್ಣೆ ಹಾಕ್ಕೊಂಡು ಆರಾಮಾಗಿ ಮಾತಾಡ್ತಾ ಗೋಪಾಲ್ ಮತ್ತು ಅತನ ಸ್ನೇಹಿತರು ಕೂತಿದ್ರೂ. ಅಗ್ಲೇ ಗಿರೀಶ್ ಕೂಡ ಆತನ ಸ್ನೇಹಿತನ ಜೊತೆ ಅದೇ ಬಾರ್ ಗೆ ಎಂಟ್ರಿಕೊಟ್ಟಿದ್ದ. ಅಗ ಗೋಪಾಲ್ ಸ್ನೇಹಿತ ಕರೇಗೌಡ ಗಿರೀಶ್ ಅನ್ನ ನೋಡಿ ಎಲೆಕ್ಟ್ರಿಷಿಯನ್ ಕೆಲಸದ 1500 ರೂಪಾಯಿ ಕೊಡುವಂತೆ ಕೇಳಿದ್ದ..ಅಗ ಗಿರೀಶ್ ಕೂಡ ಕೊಡೊಲ್ಲ ಅದೇನ್ ಮಾಡ್ಕೋತ್ತಿಯೋ ಮಾಡ್ಕೋ ಹೋಗು ಎಂದಿದ್ದ. ಅದಕ್ಕೆ ಗೋಪಾಲ್ ಸಿಟ್ಟಿಗೆದ್ದು ಗಿರೀಶ್ ಗೆ ಹೊಡೆದು ಕರೇಗೌಡನ 1,500 ರೂಪಾಯಿ ಹಣವನ್ನ ಕೊಡಿಸಿದ್ದ.
Mumbai 26/11 Attacks: ಪಾಕ್ ಜೈಲಿನಲ್ಲೇ ವಿಷ ಪ್ರಾಶನಕ್ಕೆ ತುತ್ತಾಗಿರುವ ಮೋಸ್ಟ್ ವಾಂಟೆಡ್ ಉಗ್ರ..!
ಇನ್ನೂ ಗೋಪಾಲ್ ಜೊತೆ ಬಂದಿದ್ದ ಇನ್ನೋಬ್ಬ ಸ್ನೇಹಿತ ಶಶಿಗೆ ಕಾಲ್ ಮಾಡಿದ್ದ ಗಿರೀಶ್ ನನ್ನ ಮೇಲೆ ಕೈ ಮಾಡಿದ್ರಿ ಅಲ್ವಾ ನಿಮ್ಮನ್ನ ಸುಮ್ಮನೆ ಬಿಡೋದಿಲ್ಲ ಅಂತಾ ಅವಾಚ್ಯ ಶಬ್ಧದಿಂದ ಬೈದಿದ್ದಾನೆ. ಇದಕ್ಕೆ ಸಿಟ್ಟಿಗೆದ್ದ ಗೋಪಾಲ, ಕರೇಗೌಡ ಮತ್ತು ಶಶಿ ಗಿರೀಶ್ ಅನ್ನ ಹುಡ್ಕೊಂಡು ಅವನ ಮನೆಗೆ ಹೋಗಿದ್ದಾರೆ. ಅಗ ಗಿರೀಶನ ಹೆಂಡ್ತಿ ತಪ್ಪಾಗಿದೆ ಇದೊಂದು ಸಾರಿ ಬಿಡಿ ಅಂತಾ ಗೋಪಾಲ್ನ ಬಳಿ ಕೇಳಿಕೊಂಡಿದ್ದಾಳೆ. ನಾವೇನು ಮಾಡೊಲ್ಲ ಅವನಿಗೆ ಸರಿಯಾಗಿ ಮಾತಾಡೋದನ್ನ ಕಲಿಸಿ ಅಂದಿದ್ದ.
ಆಗ ಗಿರೀಶ್ ಅಡುಗೆ ಮನೆಗೆ ಹೋಗಿ ಚಾಕು ತಂದು ತನ್ನ ಬೆನ್ನ ಹಿಂದೆ ಇಟ್ಟುಕೊಂಡಿದ್ದ. ಮಾತಾಡ್ತಿದ್ದ ಗೋಪಾಲ್ ಎದೆಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದ. ತಕ್ಷಣವೇ ಗೋಪಾಲನನ್ನ ಅತನ ಸ್ನೇಹಿತರು ಆಸ್ಪತ್ರೆಗೆ ಸೇರಿಸಿದ್ರೂ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳಿದ್ದಾನೆ. ಇನ್ನೂ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿ ಗಿರೀಶ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಸ್ನೇಹಿತನ ಹಣ ಕೊಡಿಸೋಕೆ ಹೋದವನು ಹೆಣವಾಗಿದ್ದು ಮಾತ್ರ ದುರಂತವೇ ಸರಿ.