ಚಿಕ್ಕೋಡಿ:- ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರು ಗ್ರಾಮದಲ್ಲಿ ತಾನೇ ಸಾಕಿ ಸಲುಹುತ್ತಿದ್ದ ಮಾವುತನನ್ನು ಆನೆಯೊಂದು ಸೊಂಡಿಲಿನಿಂದ ತಿವಿದು ಕೊಂದಿರುವ ಮನಕಲಕುವ ಘಟನೆ ಜರುಗಿದೆ.
ಕಿಡ್ನಿ ಸಂಬಂಧಿ ಕಾಯಿಲೆ: ಖ್ಯಾತ ನಿರ್ಮಾಪಕ ಶ್ಯಾಮ್ ಬೆನಗಲ್ ಇನ್ನಿಲ್ಲ!
30 ವರ್ಷದ ಕರಿಯಪ್ಪ ಬೇವನೂರ ಮೃತ ದುರ್ದೈವಿ. ಅಲಖನೂರ ಶ್ರೀ ಕರಿಸಿದ್ದೇಶ್ವ ದೇವಸ್ಥಾನದ 21 ವರ್ಷದ ಧ್ರುವ ಹೆಸರಿನ ಆನೆ ತನ್ನ ಮಾವುತನನ್ನೆ ಸಾಯಿಸಿದೆ. ಭಾನುವಾರ ರಾತ್ರಿ ಆನೆಗೆ ಮದ ಬಂದಿತ್ತು. ಇಂದು ಬೆಳಗ್ಗೆ ಕರಿಯಪ್ಪ ಮೇವು ಹಾಕಲು ಹೋದಾಗ ಗಂಡಾನೆ ಸೊಂಡಿಲಿನಿಂದ ಹಾಗೂ ದಂತಗಳಿಂದ ತಿವಿದು ಹತ್ಯೆ ಮಾಡಿದೆ.
ಕಳೆದ 10 ದಿನದ ಹಿಂದೆಯಷ್ಟೇ ಕರಿಯಪ್ಪಗೆ ಗಂಡು ಮಗು ಜನಿಸಿತ್ತು. ಕರಿಯಪ್ಪ ಸಾವಿನ ವಿಷಯ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.