ಬೆಂಗಳೂರು:- ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ತಾರೆ ಎಂಬ ವಿಚಾರ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆಗೆ ಫಿಕ್ಸ್ ಆಗಿದೆ.
ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಔಟ್: ಕಿಚ್ಚನ ಮುಂದೆ ಕಣ್ಣೀರು ಹಾಕಿ ಹೇಳಿದ್ದೇನು?
ದಳ ಮನೆಯಲ್ಲಿನ ಭಿನ್ನರಾಗವೇ ಆಪರೇಷನ್ ಹಸ್ತಕ್ಕೆ ಚಾನ್ಸ್ ಕೊಟ್ಟಂತಾಗುತ್ತೆ ಅನ್ನೋ ಭಯದಲ್ಲಿರೋ ಕುಮಾರಸ್ವಾಮಿ ಮುನ್ನೆಚ್ಚರಿಕೆಯಾಗಿ ಸಭೆ ಮಾಡೋ ಮೂಲಕ ವಿಶ್ವಾಸಕ್ಕೆ ತೆಗೆದಕೊಳ್ಳೋ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕರ ಆಟಕ್ಕೆ ಬ್ರೇಕ್ ಹಾಕುವ ಪ್ರಯತ್ನವನ್ನೂ ನಡೆಸುತ್ತಿದ್ದಾರೆ
ಬೆಂಗಳೂರಿನ ಶೇಷಾದ್ರಿಪುರಂನ ಜೆಡಿಎಸ್ ಕಚೇರಿಯಲ್ಲಿ ಸಭೆ ನಡೆಸಲಾಯ್ತು, ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೀತು. ಸಭೆಯಲ್ಲಿ ಜೆಡಿಎಸ್ನ ಹಾಲಿ, ಮಾಜಿ ಶಾಸಕರು, ಪರಿಷತ್ ಸದಸ್ಯರು ಭಾಗಿಯಾದ್ರು, ಪಕ್ಷದಲ್ಲಿನ ಬೆಳವಣಿಗೆ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಪಡೆದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳೋ ಪ್ರಯತ್ನ ನಡೆಸಿದರು.
ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಏಪ್ರಿಲ್ನೊಳಗೆ JDS ರಾಜ್ಯಾಧ್ಯಕ್ಷರ ಆಯ್ಕೆ ಮಾಡುತ್ತೇವೆ. ಚುನಾವಣೆ ಮೂಲಕ JDS ರಾಜ್ಯಾಧ್ಯಕ್ಷರ ಆಯ್ಕೆ ಮಾಡುತ್ತೇವೆ. ನಾನು ನಾಲ್ಕು ದಿನಗಳ ಕಾಲ ನವದೆಹಲಿಯಲ್ಲಿ ಇರುತ್ತೇನೆ. ಹೀಗಾಗಿ ನಮ್ಮ ಪಕ್ಷದ ಎಲ್ಲ ಪ್ರಮುಖರಿಗೆ ಕಟ್ಟು ನಿಟ್ಟಾಗಿ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು