ಮಡಿಕೇರಿ:- ಕೊಡಗಿನ ಹಲವೆಡೆ ಕಂಪಿಸಿದ ಭೂಮಿ ಕಂಪಿಸಿದ್ದು, ಜನತೆ ಬೆಚ್ಚಿದ್ದಾರೆ. ಕೊಡಗಿನ ಹಲವೆಡೆ ಇಂದು ಬೆಳಗ್ಗೆ 10:50ರ ಸುಮಾರಿಗೆ ಭೂ ಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ತಾಲೂಕಿನ ಎರಡನೇ ಮೊಣ್ಣಗೇರಿ, ಮದೆನಾಡು ಗ್ರಾಮ, ಬೆಟ್ಟತ್ತೂರಿನ ಸುತ್ತಮುತ್ತಲಿನಲ್ಲಿ ಕಂಪನದ ಅನುಭವವಾಗಿದೆ. ಪದ್ಮನಾಭ ಮತ್ತು ಭರತ್ ಎಂಬುವವರ ಮನೆಯ ಅಸುಪಾಸಿನಲ್ಲಿ ಭೂಮಿ ಕಂಪಿಸಿದೆ. 2018ರಲ್ಲಿಯೂ ಈ ಭಾಗದಲ್ಲಿ ಕಂಪನದ ಅನುಭವ ಆಗಿತ್ತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ
ಭೂ ಕಂಪನದ ತೀವ್ರತೆಯು ರಿಕ್ಟರ್ ಮಾಪನದಲ್ಲಿ ದಾಖಲಾಗಿಲ್ಲ. ಭೂಮಿ ಕಂಪಿಸಿದ ಸಂದೇಶವು ವಾಟ್ಸಪ್ ಗ್ರೂಪ್ಗಳಲ್ಲಿ ಹರಿದಾಡಿದೆ. ಸ್ಥಳೀಯರಿಂದ ಭೂಕಂಪನದ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ನಮ್ಮ ಪಂಚಾಯತಿ ಸಿಬ್ಬಂದಿಗಳು ಭೂಕಂಪದ ಅನುಭವವನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಹೆಚ್ಚಿನ ವಿವರಗಳನ್ನು ಪಡೆಯಲು ಪತ್ರ ಬರೆಯಲು ಕಾರ್ಯಪ್ರವೃತ್ತರಾಗಿದ್ದೇವೆ. ಸುಮಾರು 11 ಗಂಟೆ ವೇಳೆಯಲ್ಲಿ ಗುಡುಗಿನ ರೀತಿಯಲ್ಲಿ ಶಬ್ದ ಅಗಿದೆ ಎಂದು ಇಲ್ಲಿನ ಸಿಬ್ಬಂದಿಗಳು ತಿಳಿಸಿದ್ದಾರೆ .