ಕಾರವಾರ: ಘಟ್ಟ ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಕುಮಟಾ ಭಾಗದ ಘಟ್ಟ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದೆ. ಕುಮಟಾ ತಾಲೂಕಿನ ದೇವಿಮನೆ ಘಟ್ಟ, ಶಿರಸಿ ತಾಲೂಕಿನ ಗ್ರಾಮವಾದ ರಾಗಿ ಹೊಸಳ್ಳಿ, ಕಸಗೆ, ಬಂಡಳ ಭಾಗದಲ್ಲಿ ಮೂರು ಸೆಕೆಂಡ್ಗೂ ಹೆಚ್ಚಿನ ಸಮಯ ಭೂಕಂಪನದ ಅನುಭವವಾಗಿದೆ. ಅಲ್ಲದೇ ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಹ ನಡೆಯುತ್ತಿದೆ. ಗುಡ್ಡ ಕೊರೆದು ರಸ್ತೆ ಮಾಡಲಾಗುತಿದ್ದು, ಕಲ್ಲುಗಳನ್ನು ಸಿಡಿಸಿರುವುದರಿಂದ ಕಂಪನ ಉಂಟಾಗಿದೆ ಎಂದು ಊಹಿಸಲಾಗಿತ್ತು. ಆಬಳಿಕ ಹಿಂದೂ ಮಹಾಸಾಗರದಲ್ಲಿ 10 ಕಿ.ಮೀ ಆಳದ ರಿಡ್ಜ್ ಮಧ್ಯದಲ್ಲಿ ಅಲ್ಪ ಮಟ್ಟದ ಭೂಕಂಪನವಾಗಿದೆ. ಇದರಿಂದಲೇ ಪಶ್ಚಿಮ ಘಟ್ಟ ಭಾಗದಲ್ಲೂ ಭೂಮಿ ಕಂಪಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಊಹಿಸಿದ್ದಾರೆ.
ವಕ್ಫ್ ಭೂಕಬಳಿಕೆ ವಿರೋಧಿಸಿ ಹೋರಾಟ ; ಜಮೀರ್ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ